
ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸಿದ್ದಲ್ಲದೆ, ಮೊದಲ ಹಂತದಲ್ಲೇ ಮಂಗಳಯಾನ ಯಶಸ್ವಿ ಹೀಗೆ ಅನೇಕ ದಾಖಲೆಗಳನ್ನು ಇಸ್ರೋ ಮಾಡಿದೆ. ಈಗ ಮತ್ತೊಮ್ಮೆ ದಾಖಲೆ ಮಾಡಿದದ್ದು ಅಂತರಿಕ್ಷದಲ್ಲಿ ಎರಡು ಉಪಗ್ರಹಗಳ ಜೋಡನೆನ್ನಯ ಯಶಸ್ವಿಯಾಗಿ ಪೂರೈಸಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸತತ 4ನೇ ಪ್ರಯತ್ನದಲ್ಲಿ ತನ್ನ Sಠಿಚಿಆeಘಿ ಉಪಗ್ರಹದ ಡಾಕಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಆ ಮೂಲಕ ಡಾಕಿಂಗ್ ಮತ್ತು ಅನ್ ಡಾಕಿಂಗ್ ಸಾಮರ್ಥ್ಯ ಹೊಂದಿದ ವಿಶ್ವದ ನಾಲ್ಕನೇ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬಾಹ್ಯಾಕಾಶದಲ್ಲಿ ಅವಳಿ ಉಪಗ್ರಹಗಳನ್ನ ಇಸ್ರೋ ಜೋಡಿಸಿದೆ. ಚೇಸರ್ ಸ್ಯಾಟಲೈಟ್ (Sಆಘಿ01), ಟಾರ್ಗೆಟ್ ಸ್ಯಾಟಲೈಟ್ (Sಆಘಿ02) ಉಪಗ್ರಹವನ್ನು ಜೋಡಿಸಲಾಗಿದೆ. ಎರಡು ಉಪಗ್ರಹಗಳು ತಲಾ 220 ಕೆಜಿ ಭಾರ ಹೊಂದಿವೆ. ಪಿಎಸ್‌ಎಲ್‌ವಿ-ಸಿ60 ರಾಕೆಟ್?ನಿಂದ ಡಿಸೆಂಬರ್ 30 ರಂದು ಇವುಗಳನ್ನು ಲಾಂಚ್ ಮಾಡಲಾಗಿತ್ತು.
2035ರ ವೇಳೆಗೆ ಭಾರತ ತನ್ನದೆಯಾದ ಬಾಹ್ಯಾಕಾಶ ನಿಲ್ದಾಣದ ಗುರಿ ಹೊಂದಿದೆ. ಹೀಗಿರುವಾಗ ಡಾಕಿಂಗ್ ಪ್ರಯೋಗ ತುಂಬಾನೇ ಮುಖ್ಯವಾಗುತ್ತದೆ. ಈ ಕೇಂದ್ರಗಳಿಗೆ ಗಗನಯಾತ್ರಿಗಳು ಮತ್ತು ಸರಕುಗಳನ್ನು ಸಾಗಿಸುವ ಬಾಹ್ಯಾಕಾಶ ನೌಕೆಗಳನ್ನು ಡಾಕಿಂಗ್ ಮೂಲಕ ನಿಲ್ದಾಣಕ್ಕೆ ಸಂಪರ್ಕಿಸಬೇಕಾಗುತ್ತದೆ.
ನಿಲ್ದಾಣಕ್ಕೆ ಗಗನಯಾತ್ರಿಗಳು, ಉಪಕರಣಗಳನ್ನು ಕಳುಹಿಸಲು ಡಾಕಿಂಗ್, ಅನ್‌ಡಾಕಿಂಗ್ ಪರಿಣತಿ ಬೇಕೇಬೇಕು. ಇದರ ಪೂರ್ವಭಾವಿ ಹಂತವಾಗಿ ಈ ಉಪಗ್ರಹಗಳ ಡಾಕಿಂಗ್, ಅನ್‌ಡಾಕಿಂಗ್ ಪ್ರಕ್ರಿಯೆ ಕೂಡ ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರಲಿದೆ.
ಅದರಂತೆ ಇಸ್ರೋ ಸ್ಪಾಡೆಕ್ಸ್ ಪ್ರಯೋಗದಲ್ಲಿ ಮೊದಲ ಹೆಜ್ಜೆಯನ್ನಿಟ್ಟಿದೆ. ಡಾಕಿಂಗ್ ತಂತ್ರಜ್ಞಾನವು ಬಾಹ್ಯಾಕಾಶದಲ್ಲಿ ವಿವಿಧ ಬಾಹ್ಯಾಕಾಶ ನೌಕೆಗಳ ನಡುವೆ, ಗಗನಯಾತ್ರಿಗಳು ಮತ್ತು ಸರಕುಗಳ ವಿನಿಮಯವನ್ನು ಸಹ ಶಕ್ತಗೊಳಿಸುತ್ತದೆ. ಇದು ಭಾರತದ ಮಾನವಸಹಿತ ಬಾಹ್ಯಾಕಾಶ ಮಿಷನ್ ‘ಗಗನಯಾನ’ಕ್ಕೆ ಉಪಯುಕ್ತವಾಗಲಿದೆ.
ಚಂದ್ರಯಾನ-4 ಮೂಲಕ ಚಂದ್ರನ ಮೇಲ್ಮೈಯಿಂದ ಭೂಮಿಗೆ ಮಾದರಿಗಳನ್ನು ತರಲು ಇಸ್ರೋ ಗುರಿ ಹೊಂದಿದೆ. ಎರಡು ರಾಕೆಟ್‌ಗಳ ಮೂಲಕ ವಿಭಿನ್ನ ಮಾಡ್ಯೂಲ್‌ಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಇವುಗಳನ್ನು ಹಂತ ಹಂತವಾಗಿ ಭೂಮಿ ಮತ್ತು ಚಂದ್ರನ ಕಕ್ಷೆಗಳಲ್ಲಿ ಡಾಕ್ ಮಾಡಬೇಕಾಗಿದೆ.
ಡಾಕಿಂಗ್ ವ್ಯವಸ್ಥೆಯು ಕಕ್ಷೆಯಲ್ಲಿರುವ ಉಪಗ್ರಹಗಳ ದುರಸ್ತಿಕಾರ್ಯ, ಇಂಧನ ತುಂಬುವಿಕೆ ಮತ್ತು ಆಧುನೀಕರಣಕ್ಕೆ ಉಪಯುಕ್ತವಾಗಲಿದೆ. ಇದು ಆ ಉಪಗ್ರಹಗಳ ಜೀವಿತಾವಧಿಯನ್ನು ಹೆಚ್ಚಿಸುತ್ತದೆ.