Mangalore and Udupi news
ಅಪಘಾತಗ್ರೌಂಡ್ ರಿಪೋರ್ಟ್ಪ್ರಸ್ತುತರಾಜ್ಯ

ಭಾರೀ ಸಂಚಲನ ಮೂಡಿಸಿದ್ದ ಪ್ರಕರಣ: ಕೊನೆಗೂ ಅರ್ಜುನ್ ಮೃತದೇಹ ಹಾಗೂ ಲಾರಿ ಪತ್ತೆ.!!

ಉತ್ತರಕನ್ನಡ ಅಂಕೋಲಾದ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಹಾಗೂ ಅದರ ಚಾಲಕ ಅರ್ಜುನ್ ಅವರ ಮೃತದೇಹ ಪತ್ತೆಯಾಗಿದೆ.

ಶಿರೂರು ಗುಡ್ಡ ಕುಸಿತ ದುರಂತ ಸಂಭವಿಸಿದ ದಿನದಿಂದ ಈ ವರೆಗೂ ಎಲ್ಲರ ಬಾಯಲ್ಲಿ ಕೂತುಹಲದಿಂದ ಕೇಳಿ ಬರುತ್ತಿದ್ದ ಮತ್ತು ವೈರಲ್ ಆಗುತ್ತಿದ್ದ ಒಂದೇ ಒಂದು ವಿಷಯ ಎಂದರೆ ಕೇರಳದ ಅರ್ಜುನ ಮತ್ತು ಬೆಂಜ್ ಲಾರಿ ಎನ್ನುವಂತಾಗಿತ್ತು.

ಹಲವು ಅಂತೆ ಕಂತೆಗಳ ನಡುವೆ ಕೊನೆಗೂ ಆ ಲಾರಿ ಪತ್ತೆಯಾಗಿದೆ. ಲಕ್ಷ್ಮಣ ನಾಯ್ಕ ಟೀ ಸ್ಟಾಲ್ ಇದ್ದ ಪ್ರದೇಶದ ಕೆಳಗಡೆ ಗಂಗಾವಳಿ ನದಿ ನೀರಿನಲ್ಲಿಯೇ ಕಲ್ಲು ಮಣ್ಣುಗಳ ರಾಶಿ ಅಡಿ ಹುದುಗಿ ಬಿದ್ದಿದ್ದ ಲಾರಿಯನ್ನು ಪತ್ತೆ ಹಚ್ಚಿ ಮೇಲೆತ್ತಲಾಗಿದೆ. ಅರ್ಜುನ್ ಮೃತದೇಹ ಕೂಡಾ ಲಾರಿ ಒಳಗಡೆ ಇದೆ ಎಂಬ ಮಾಹಿತಿ ದೊರೆತಿದೆ.

ಮೊದಲ ಹಂತದ ಕಾರ್ಯಾಚರಣೆ ಸಂದರ್ಭದಲ್ಲಿ ರಾಡಾರ್ ತಂತ್ರಜ್ಞಾನದ ಮೂಲಕ ನಾಲ್ಕು ಪಾಯಿಂಟ್ ಗಳನ್ನು ಗುರುತಿಸಿ ನಾಲ್ಕನೇ ಪಾಯಿಂಟ್ ಗುರುತಿಸಿರುವ ಸ್ಥಳದಲ್ಲಿ ಕೇರಳದ ಲಾರಿ ಇರುವ ಸಾಧ್ಯತೆ ಕುರಿತು ಅಂದಾಜಿಸಲಾಗಿತ್ತು ಇದೀಗ ಅದೇ ಸ್ಥಳದಲ್ಲಿ ಲಾರಿಯ ಬಿಡಿಭಾಗ ಪತ್ತೆಯಾಗಿದೆ.

ವಿಶ್ರಾಂತ ಸೇನಾಧಿಕಾರಿ ಮೇಜರ್ ಜನರಲ್ ಇಂದ್ರಬಾಲನ್ ಅವರ ಸೇವೆಯನ್ನು ಮತ್ತೆ ಪಡೆಯಲಾಗಿದ್ದು, ಶಾಸಕ ಸತೀಶ ಸೈಲ್ ಮತ್ತು ಆಡಳಿತ ವ್ಯವಸ್ಥೆಯ ವಿಶೇಷ ಪ್ರಯತ್ನ ಹಾಗೂ ವಿನಂತಿ ಮೇರೆಗೆ,ಅವರು ದೆಹಲಿಯಿಂದ ಅಂಕೋಲಾದ ಶಿರೂರು ಘಟನಾ ಸ್ಥಳಕ್ಕೆ ಮತ್ತೆ ಬಂದು ಹೋಗಿದ್ದರು.

ಕಾರ್ಯಾಚರಣೆ ಸಂದರ್ಭದಲ್ಲಿ ಹಾಜರಿದ್ದು ಗುರುತಿಸಿರುವ ನಾಲ್ಕನೇ ಪಾಯಿಂಟ್ ನಲ್ಲಿ ನೀರಿನ ಆಳದಲ್ಲಿ ಲಾರಿ ಇದ್ದು ಅದರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಬಿದ್ದಿರುವ ಸಾಧ್ಯತೆ ಹಿನ್ನಲೆಯಲ್ಲಿ, ಮಣ್ಣು ತೆರುವು ಮಾಡಿ ಲಾರಿ ಮೇಲೆಕ್ಕೆ ಎತ್ತಬೇಕಾಗ ಬಹುದು ಎನ್ನಲಾಗುತ್ತಿತ್ತು.

Related posts

Leave a Comment