Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ಪ್ರಸ್ತುತಮಂಗಳೂರು

ಮಂಗಳೂರು: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ರಿಯಲ್ ಎಸ್ಟೆಟ್ ಉದ್ಯಮಿ ರಶೀದ್.!

ಮಂಗಳೂರು: ರಿಯಲ್ ಎಸ್ಟೆಟ್ ಉದ್ಯಮಿಯೋರ್ವರು ಯುವತಿಗೆ ಲೈಂಗಿಕ ಕಿರುಕುಳ ನೀಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಆರೋಪಿ ವಿರುದ್ದ ಸಂತ್ರಸ್ಥೆ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.

15 ದಿನಗಳ ಹಿಂದೆ ಸ್ನೇಹಿತರ ಬಳಿ ಯುವತಿಯ ನಂಬರ್ ಪಡೆದುಕೊಂಡಿದ್ದ ರಿಯಲ್ ಎಸ್ಟೆಟ್ ಉದ್ಯಮಿ ರಶೀದ್ ಯುವತಿಗೆ ಕರೆ ಮಾಡಿ ಕುಶಾಲನಗರದ ಸೈಟ್ ಬಗ್ಗೆ ವಿವರಿಸಿ ಖರೀದಿಸಲು ತಿಳಿಸಿದ್ದ. ಯುವತಿ ಅಲ್ಲಿನ ಸ್ಥಳೀಯ ನಿವಾಸಿ ಆದ ಕಾರಣ ಜಾಗ ಖರೀದಿಸಲು ಒಲವು ತೋರಿದ್ದರು. ಉದ್ಯಮಿ ಜಾಗ ನೋಡಲು ನನ್ನ ಕಾರಿನಲ್ಲೇ ಬಾ ನಾನೇ ನಿನ್ನನ್ನು ಕರೆದುಕೊಂಡು ಹೋಗುತ್ತಾನೆ ಎಂದು ಹೇಳಿದಾಗ ಯುವತಿ ಒಪ್ಪಿಕೊಂಡಿದ್ದರು.

ಹಾಗೇ ರಾತ್ರಿ 8 ಗಂಟೆ ಸುಮಾರಿಗೆ ಕೊಡಗಿನ ವಿರಾಜಪೇಟೆ ತಲುಪಿದರು. ಯುವತಿ ಉಳಿದುಕೊಳ್ಳಲು ಹೋಟೆಲ್ ನಲ್ಲಿ 2 ರೂಂ ಬುಕ್ ಮಾಡಿದ್ದರು. ಇದನ್ನು ಪ್ರಶ್ನಿಸಿದ ರಶೀದ್ ಒಂದೇ ರೊಮ್ ನಲ್ಲಿ ಇರಬಹುದು ಅಲ್ಲಾ 2 ಯಾಕೆ ಬಕ್ ಮಾಡಿದ್ದು ಎಂದಿದ್ದಾನೆ. ಗಾಬರಿಗೊಂಡ ಯುವತಿ ಅಲ್ಲಿಂದ ತೆರಳಿ ಸಮೀಪದ ತಂಗಿಯ ಮನೆಯಲ್ಲಿ ಉಳಿದುಕೊಂಡಿದ್ದರು. ಮರುದಿನ ರಶೀದ್ ಕರೆ ಮಾಡಿ 12 ಗಂಟೆಗೆ ಸೈಟ್ ನೋಡಲು ಬಾ ಎಂದು ಕರೆದಿದ್ದಾನೆ.

ನಿನ್ನೆ ಒಂದೇ ರೂಂ ನಲ್ಲಿ ಇರಬಹುದಿತ್ತು ನಾನು ಏನೋ ನಿರೀಕ್ಷೆ ಮಾಡಿದ್ದೆ ಎಂದಾಗ ಯುವತಿ ನೀವು ಹೀಗೆ ಮಾತಾನಾಡುವುದು ಸರೀ ಅಲ್ಲ ನೀವು ವಯಸ್ಸಿನಲ್ಲಿ ನನ್ನ ತಂದೆ ಸಮಾನ ಎಂದಾಗ ತಪ್ಪಾಯಿತು ಸಾರಿ ಎಂದಿದ್ದನು. ಮತ್ತೆ ಕಾರಿನಲ್ಲಿ ಸೈಟ್ ನೋಡಲು ತೆರಳಿದಾಗ ದಾರಿ ಮಧ್ಯೆ ಕಾರು ನಿಲ್ಲಿಸಿ 1 ಲಕ್ಷ ನೋಟಿನ ಕಟ್ಟು ತೋರಿಸಿ ನನಗೆ ನೀನು ಬೇಕು, ನೀನು ನನ್ನ ಜೊತೆ ಸಹಕರಿಸಿದರೆ ಈ ಹಣ ನೀಡುತ್ತೇನೆ ಎಂದಾಗ ಯುವತಿ ವಿರೋಧಿಸಿದ್ದಾಳೆ.

ಬಳಿಕವೂ ನೀನು ಸಹಕರಿಸಿದರೆ ಕುಶಾಲನಗರ ದಲ್ಲಿ ಇರುವ ತನ್ನ 2 ಪ್ಲಾಟ್ ಗಳನ್ನು ನಿನ್ನ ಹೆಸರಿಗೆ ಬರೆಯುತ್ತೆನೆ ಎಂದು ಆಫರ್ ಮೇಲೆ ಆಫರ್ ಕೊಟ್ಟು ಯುವತಿಯ ಎದೆ, ಮೈಮೇಲೆ ಕೈ ಹಾಕಿದ್ದಾನೆ. ಇದಕ್ಕೆ ಆತಂಕಗೊ0ಡ ಯುವತಿ ಬೊಬ್ಬೆ ಹಾಕಿ ಕಾರಿನಿಂದ ಇಳಿದು ತಪ್ಪಿಕೊಂಡಿದ್ದಾಳೆ. ಬಳಿಕ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಲೈಂಗಿಕ ಕಿರುಕುಳ ನೀಡಿ, ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ನೀಡಿರುವ ಬಗ್ಗೆ ರಶೀದ್ ವಿರುದ್ಧ ದೂರು ನೀಡಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Rashid is a real estate businessman who sexually harassed a young woman
Rashid, a real estate businessman, sexually harassed and assaulted with unspoken words. case registered

Related posts

Leave a Comment