Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಉಡುಪಿ: ಚಾಕೊಲೇಟ್ ತೋರಿಸಿ 5 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ – ಪ್ರಕರಣ ದಾಖಲು

Advertisement

ಉಡುಪಿ: ಉಡುಪಿಯಲ್ಲಿ ಐದು ವರ್ಷ ಮಗುವಿನ ಮೇಲೆ ಲೈಂಗಿಕ ಕಿರುಕುಳ ನಡೆದಿದ್ದು ಪ್ರಕರಣ ದಾಖಲಾಗಿದೆ.ನಗರದ ಹೃದಯ ಭಾಗದಲ್ಲಿ ಶುಕ್ರವಾರ ಸಂಜೆ ಈ ನಡೆದ ನಡೆದಿದೆ. ಭಿಕ್ಷೆ ಬೇಡುತ್ತಾ ಓಡಾಡುತ್ತಿದ್ದ ವ್ಯಕ್ತಿಯಿಂದ ಈ ಕೃತ್ಯ ನಡೆದಿದ್ದು ಆರೋಪಿಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಮಗು, ಮತ್ತೋರ್ವ ಬಾಲಕಿ ಜೊತೆ ಓಡಾಡುತ್ತಿದ್ದಾಗ ಆರೋಪಿ ಮಗುವಿಗೆ ಚಾಕಲೇಟ್ ಆಸೆ ತೋರಿಸಿದ್ದಾನೆ. ಚಾಕಲೇಟ್ ತೋರಿಸಿದ ಆರೋಪಿ ಮಗುವನ್ನು ಪಕ್ಕದ ಕಾಲು ದಾರಿಯಲ್ಲಿ ಕರೆದುಕೊಂಡು ಹೋಗಿದ್ದಾನೆ.

ಕಾಲು ದಾರಿಯಲ್ಲಿದ್ದ ಬೇಲಿ ಪಕ್ಕದಲ್ಲೇ ಲೈಂಗಿಕ ಕಿರುಕುಳ ನೀಡಲು ಆರೋಪಿ ಮುಂದಾಗಿದ್ದು ಈ ವೇಳೆ ಮಗುವನ್ನು ಹುಡುಕಿಕೊಂಡು ಬಂದ ಬಾಲಕಿಯನ್ನು ಕಂಡು ಆರೋಪಿ ಓಡಿ ಹೋಗಿದ್ದಾನೆ. ಬಳಿಕ ಮಗು ಮನೆಯಲ್ಲಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪೋಷಕರಲ್ಲಿ ಬಾಯ್ದಿಟ್ಟಿದೆ. ಈ ಬಗ್ಗೆ ಪೋಷಕರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Related posts

Leave a Comment