Mangalore and Udupi news
ಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರುರಾಜ್ಯ

ಮಂಗಳೂರು: ವಿಮಾನ ನಿಲ್ದಾಣದ ಭದ್ರತಾ ವಿಭಾಗದ ಶ್ವಾನ ‘ಜ್ಯೂಲಿ’ಗೆ ವಿದಾಯ – ‘ರಿಯೊ’ಎಂಟ್ರಿ.!

ಮಂಗಳೂರು: ದೇಶದ ಅತೀ ಸೂಕ್ಮಾ ವಿಮಾನ ನಿಲ್ದಾಣಗಳಲ್ಲಿ ಒಂದಾದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತೆಯ ಹೊಣೆ ‘ರಿಯೊ’ ಹೆಗಲೇರಿದೆ.

ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ವಿಭಾಗದ ಶ್ವಾನ ತಂಡದಲ್ಲಿದ್ದ ಲ್ಯಾಬ್ರಡಾರ್ ಶ್ವಾನ ೮ರ ಹರೆಯದ ಜ್ಯೂಲಿ ನಿವೃತ್ತಿಯಾಗಿದ್ದು, ಜೂಲಿಯ ನಿರ್ಗಮನದ ಬೆನ್ನಲ್ಲೆ ತಂಡಕ್ಕೆ 11 ತಿಂಗಳ ಲ್ಯಾಬ್ರಡಾರ್ ಶ್ವಾನ ರಿಯೊ ಸೇರಿಕೊಂಡಿದೆ.

ಹಿರಿಯ ಕಮಾಂಡೆಂಟ್ ಮತ್ತು ಮುಖ್ಯ ಏರೋಡ್ರೋಮ್ ಭದ್ರತಾ ಅಧಿಕಾರಿ ವೀರೇಂದ್ರ ಮೋಹನ್ ಜೋಶಿ, ಮತ್ತು ಇತರ ಅಧಿಕಾರಿಗಳು ಶ್ವಾನ ಜೂಲಿಯ ಅಚಲವಾದ ಸಮರ್ಪಣೆ ಮತ್ತು ನಿಷ್ಠೆಯನ್ನು ಗುರುತಿಸಿ ಮಾಲಾರ್ಪಣೆಗೈದರು.

ನಿವೃತ್ತಿಯಾಗಿರುವ ಜ್ಯೂಲಿಯನ್ನು ಆಕೆಯ ಹ್ಯಾಂಡ್ಲರ್ ಸಿಐಎಸ್‌ಎಫ್ ಯೋಧ ಕುಮಾರ ದತ್ತು ಸ್ವೀಕರಿಸಿದ್ದಾರೆ. ರಿಯೊಗೆ ರಾಂಚಿಯಲ್ಲಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಶ್ವಾನ ತರಬೇತಿ ಕೇಂದ್ರದಲ್ಲಿ ಕಠಿಣ ತರಬೇತಿ ನೀಡಲಾಗಿದೆ.

Rio the labrador joins Mangaluru International Airport dog squad

Mangaluru International Airport (MIA) recently bid farewell to Julie, the beloved 8-year-old Labrador and member of the K9 squad of the Airport Security Group of Central Industrial Security Force (CISF).

The K9 Squad welcomed Rio, an 11-month-old Labrador puppy, into the squad as Julie’s replacement on the occasion. Virendra Mohan Joshi, Senior Commandant and Chief Aerodrome Security Officer and other officers of CISF garlanded Julie in recognition of her unwavering dedication and loyalty, ensuring the safety and security of countless passengers and airport staff.

Related posts

Leave a Comment