ಸುರತ್ಕಲ್: ಜ್ವರದ ಕಾರಣ ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟ ಘಟನೆ ಅ.20 ಭಾನುವಾರ ನಡೆದಿದೆ.
ಸುರತ್ಕಲ್ ಕಡಂಬೋಡಿ ನಿವಾಸಿ ಕೃಷ್ಣ (55) ಮೃತಪಟ್ಟವರು. ಇವರ ಸಾವಿಗೆ ಇಲಿ ಜ್ವರ ಕಾರಣ ಎಂದು ಶಂಕಿಸಲಾಗಿದೆ.
ಕೃಷ್ಣ ಅವರು ಸುರತ್ಕಲ್ನಲ್ಲಿ ರಿಕ್ಷಾ ಚಾಲಕರಾಗಿಯೂ ಕೆಲಸ ಮಾಡಿದ್ದು,ಸದ್ಯ ಟೂರಿಸ್ಟ್ ಕಾರು ಚಲಾಯಿಸುತ್ತಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.
Suratkal: A man who was admitted to Mangalore’s Wenlock Hospital died due to fever. Krishna (55), a resident of Suratkal Kadambodi, died. Rat fever(leptospirosis) is suspected to be the cause of his death.