Mangalore and Udupi news
ಅಪರಾಧಕಾಸರಗೋಡುಪ್ರಸ್ತುತರಾಜ್ಯ

ಗರ್ಭಿಣಿ ಆತ್ಮಹತ್ಯೆ: ಕಿರುಕುಳ ನೀಡುತ್ತಿದ್ದ ಗಂಡ ಅರೆಸ್ಟ್.!!

ಕಾಸರಗೋಡು: ಮೂರು ತಿಂಗಳ ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ ಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಕಯ್ಯಾರ್ ಕನ್ನಟಿಪ್ಪಾರೆ ಶಾಂತಿಯೋಡು ನಿವಾಸಿ ಜನಾರ್ಧನ (39) ಬಂಧಿತ ಆರೋಪಿ.

ಮಂಗಳೂರು ವಾಮಂಜೂರು ಪಿಲಿಕುಳ ದ ವಿಜೇತ ( 32) ಆಗಸ್ಟ್ 18 ರಂದು ಮನೆಯೊಳಗೆ ಫ್ಯಾನ್ ಗೆ ನೇಣು ಬಿಗಿದು ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಪೊಲೀಸರು ನಡೆಸಿದ ತನಿಖೆ ಯಿಂದ ವಿಜೇತ ಆತ್ಮಹತ್ಯೆ ಕುರಿತು ಬರೆದಿಟ್ಟಿದ್ದ ಡೆತ್ ನೋಟ್ ಲಭಿಸಿತ್ತು. ದೈಹಿಕ ಹಾಗೂ ಮಾನಸಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿ ತನಿಖೆಯಿಂದ ಸ್ಪಷ್ಟಗೊಂಡಿತ್ತು.

ವಿಜೇತರ ಸಾವಿಗೆ ಜನಾರ್ಧನನ ಕಿರುಕುಳ ಕಾರಣ ಎಂದು ತನಿಖೆಯಿಂದ ತಿಳಿದುಬಂದಿತ್ತು. ಆರೋಪಿಯನ್ನು ಕುಂಬಳೆ ಪೊಲೀಸರು ಪೊಲೀಸರು ಠಾಣೆಗೆ ಕರೆಸಿ ಬಂಧಿಸಿದ್ದಾರೆ. ಬಂಧಿತನನ್ನು ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Related posts

Leave a Comment