Mangalore and Udupi news
ದೇಶ- ವಿದೇಶಪ್ರಸ್ತುತ

ಶಿವರಾತ್ರಿಗೂ ಮುನ್ನ ರೈತರಿಗೆ ಸಿಹಿ ಸುದ್ದಿ ಕೊಟ್ಟ ಪ್ರಧಾನಿ ಮೋದಿ; ಖಾತೆಗೆ 2000 ರೂಪಾಯಿ ಬಿಡುಗಡೆ!

Advertisement

ದೇಶದ ರೈತ ಬಾಂಧವರಿಗೆ ಕೇಂದ್ರ ಸರ್ಕಾರ ನೀಡುವ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಮತ್ತೊಂದು ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಈಗಾಗಲೇ ದೇಶದ 11 ಕೋಟಿ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ 3.46 ಲಕ್ಷ ಕೋಟಿ ರೂಪಾಯಿ ಹಣ ಜಮಾ ಆಗಿದೆ.

ಪಿಎಂ ಕಿಸಾನ್ ಯೋಜನೆಯಲ್ಲಿ 19ನೇ ಕಂತಿನ 2000 ಹಣವನ್ನು ಇಂದು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಪ್ರಧಾನಮಂತ್ರಿ ಕಿಸಾನ್ ಯೋಜನೆಯಲ್ಲಿ ಇದುವರೆಗೂ 3.68 ಲಕ್ಷ ಕೋಟಿ ರೂಪಾಯಿ ರೈತರ ಖಾತೆಗಳಿಗೆ ಸಂದಾಯವಾಗಿದೆ.

ಪ್ರಧಾನಿ ನರೇಂದ್ರ ಮೋದಿ 2019ರ ಫೆಬ್ರವರಿ 14ರಂದು ರೈತರಿಗಾಗಿ ಪಿಎಂ ಕಿಸಾನ್ ಯೋಜನೆಗೆ ಚಾಲನೆ ನೀಡಿದ್ದರು. ರೈತರ ಖಾತೆಗಳಿಗೆ ವರ್ಷಕ್ಕೆ 6000 ರೂಪಾಯಿ ಹಣ ನೀಡುವ ಯೋಜನೆ ಇದಾಗಿದ್ದು, ಇದುವರೆಗೂ 2000 ರೂಪಾಯಿಗಳಂತೆ 18 ಕಂತಿನಲ್ಲಿ ಬಿಡುಗಡೆ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಿಹಾರ ರಾಜ್ಯದ ಪ್ರವಾಸ ಕೈಗೊಂಡಿದ್ದಾರೆ. ಭಾಗಲ್ಪುರನಲ್ಲಿ ರೈತರಿಗೆ ಸಂದಾಯವಾಗುವ 19ನೇ ಕಂತಿನ ಹಣ ಜಮೆಯಾಗುವ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ.

ಕೃಷಿ ಕುಟುಂಬಕ್ಕೆ ಬೇಸಾಯ ಹಾಗೂ ಸಾಲದ ಹೊರೆಯಿಂದ ಪಾರಾಗಲು ವರ್ಷಕ್ಕೆ 6000 ರೂಪಾಯಿ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ. ಈ ಯೋಜನೆಗಾಗಿ 2020ರ ಬಜೆಟ್‌ನಲ್ಲಿ ಒಟ್ಟು 6 ಸಾವಿರದ 865 ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗಿದೆ. ಪಿಎಂ ಕಿಸಾನ್ ಯೋಜನೆಯು 2027-28ನೇ ಬಜೆಟ್‌ನವರೆಗೂ ಜಮಾ ಮಾಡುವ ಗುರಿ ಹೊಂದಲಾಗಿದೆ.

Related posts

Leave a Comment