ಬಂದೂಕು ತೋರಿಸಿ ಮನೆಯಿಂದಲೇ ಕಿಡ್ನಾಪ್: ಬಲವಂತವಾಗಿ ಮದುವೆ ಮತಾಂತರ.!! ಒಂದಲ್ಲ.. ಎರಡಲ್ಲ.. ನಡೆಯುತ್ತಿದೆ ಹಲವು ಪ್ರಕರಣ: 10, 15 ವರ್ಷದ ಹಿಂದೂ ಹುಡುಗಿಯರ ಅಪಹರಿಸಿ ಮದುವೆ ಮತಾಂತರ
ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವ ಘಟನೆಗಳು ಬೆಳಕಿಗೆ ಬರುತ್ತಿವೆ. ಬಲವಂತವಾಗಿ ಮತಾಂತರ, ಹಿಂದೂ ಬಾಲಕಿಯರ ಅಪಹರಣ ಇತಂಹ ದೌರ್ಜನ್ಯಗಳು ನಡೆಯುತ್ತಿದೆ. ಕಳೆದ ಹಲವು ದಿನಗಳಲ್ಲಿ ನಡೆದ ಸುಮಾರು ಘಟನೆಗಳ ವರದಿ ಇಲ್ಲಿದೆ.
ಒಂದೆಡೆ, 10 ವರ್ಷದ ಹಿಂದೂ ಬಾಲಕಿಯ ಅಪಹರಿಸಿ ಮುಸ್ಲಿಂ ವ್ಯಕ್ತಿಯೊಂದಿಗೆ ಬಲವಂತವಾಗಿ ಮದುವೆ…! ಮತ್ತೊಂದೆಡೆ 15 ವರ್ಷದ ಹಿಂದೂ ಹುಡುಗಿ ಅಪಹರಣ… ಇನ್ನೊಂದೆಡೆ ಮನೆಯವರ ಎದುರೇ ಬಂದೂಕು ತೋರಿಸಿ 14 ವರ್ಷದ ಹಿಂದೂ ಹುಡುಗಿಯ ಅಪರಣ… 15ರ ಹರೆಯದ ಹಿಂದೂ ಬಾಲಕಿಯನ್ನು ಸುಳ್ಳು ದಾಖಲೆ ಸೃಷ್ಟಿಸಿ ಮದುವೆ ಹಾಗೂ ಮತಾಂತರ, ಅಪಹರಣ ಮತ್ತು ಮತಾಂತರವನ್ನು ವಿರೋಧಿಸಿದ್ದಕ್ಕೆ ಹೀನಾಯವಾಗಿ ಕೊಲೆ…. ಅಬ್ಬಬ್ಬಾ ಏನೀದು ಘಟನೆ.. ನಿರಂತರವಾಗಿ ಹಿಂದೂಗಳ ಮೇಲೆ ದೌರ್ಜನ್ಯ.. ಏನಿದು ಸಿನಿಮಾದಲ್ಲಿ ಬರುವ ಸನ್ನಿವೇಶಗಳಂತಿರುವ ಈ ಘಟನೆಗಳು ನಿರಂತರವಾಗಿ ಪಾಕಿಸ್ತಾನದಲ್ಲಿ ನಡೆಯುತ್ತಿದೆ ಎಂದು ವರದಿಯಾಗಿದೆ.
ಸಿಂಧ್ ಪ್ರಾಂತ್ಯದಲ್ಲಿ 10 ವರ್ಷದ ಹಿಂದೂ ಬಾಲಕಿಯ ಅಪಹರಣ
ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 10 ವರ್ಷದ ಹಿಂದೂ ಬಾಲಕಿಯನ್ನು ಅಪಹರಿಸಿ ಮುಸ್ಲಿಂ ವ್ಯಕ್ತಿಯೊಂದಿಗೆ ಬಲವಂತವಾಗಿ ಮದುವೆ ಮಾಡಲಾಗಿತ್ತು, ಆದರೆ ಅಧಿಕಾರಿಗಳು ಆಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೊಂದು ಪ್ರಕರಣದಲ್ಲಿ 15 ವರ್ಷದ ಹಿಂದೂ ಹುಡುಗಿಯನ್ನು 50 ವರ್ಷದ ಮುಸ್ಲಿಂ ವ್ಯಕ್ತಿಯೊಂದಿಗೆ ವಿವಾಹ ಮಾಡಲಾಗಿತ್ತು. ಈಕೆ ಇನ್ನೂ ಪತ್ತೆಯಾಗಿಲ್ಲ. ಇದಕ್ಕೆಲ್ಲ ಭ್ರಷ್ಟ ಪೊಲೀಸ್ ಅಧಿಕಾರಿಗಳು ಕಾರಣ ಎಂದು ಆರೋಪಿಸಲಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಲು ಹಾಗೂ ಸಂತ್ರಸ್ತರ ಕುಟುಂಬಗಳು ನ್ಯಾಯವನ್ನು ಕೋರಿ ಬಂದಾಗ ಸರಿಯಾಗಿ ಸಹಕರಿಸದೇ ಅನ್ಯಾಯ ಮಾಡಲಾಗುತ್ತದೆ ಎನ್ನಲಾಗಿದೆ.
ಮಿರ್ಪುರ್ಖಾಸ್‌ನಲ್ಲಿ 10 ವರ್ಷದ ಬಾಲಕಿಯ ಅಪಹರಣ
ಇತ್ತೀಚೆಗೆ 10 ವರ್ಷದ ಬಾಲಕಿಯ ಅಪಹರಣವು ಮಿರ್ಪುರ್ಖಾಸ್‌ನ ಕೋಟ್ ಗುಲಾಮ್ ಮುಹಮ್ಮದ್ ಗ್ರಾಮದಲ್ಲಿ ಸಂಭವಿಸಿದೆ. ಹುಡುಗಿಯನ್ನು ತನ್ನ ಮನೆಯ ಹೊರಗಿನಿಂದ ಅಪಹರಿಸಲಾಗಿದೆ. ನಂತರ ಶಾಹಿದ್ ತಲ್ಪುರ್ ಎಂಬ ವ್ಯಕ್ತಿಯೊಂದಿಗೆ ಮದುವೆ ಮಾಡಿಸುವ ಮೊದಲು ಆಕೆಯನ್ನು ಇಸ್ಲಾಂಗೆ ಮತಾಂತರಿಸಿದ್ದಾರೆ. ನಂತರ ಅಧಿಕಾರಿಗಳೂ ದಾಳಿ ನಡೆಸಿ ಹುಡುಗಿಯನ್ನು ರಕ್ಷಿಸಿ ಅವರ ಕುಟುಂಬಕ್ಕೆ ಹಿಂತಿರುಗಿಸಿದ್ದಾರೆ ಎಂದು ವರದಿಯಾಗಿದೆ.
ಸುಳ್ಳು ದಾಖಲೆ ಸೃಷ್ಟಿ ಮಾಡಿ ಮದುವೆ
ಇನ್ನೂ 15ರ ಹರೆಯದ ಬಾಲಕಿ ಕಳೆದ ಭಾನುವಾರದಿಂದ ನಾಪತ್ತೆಯಾಗಿದ್ದು, ಆಕೆಯ ಅಪಹರಣ ಮಾಡಿದ ದುಷ್ಕರ್ಮಿಗಳು ಆಕೆಗೆ 20 ವರ್ಷ ವಯಸ್ಸಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿ ಮಾಡಿ ಮದುವೆ ಮತ್ತು ಮತಾಂತರ ಪ್ರಮಾಣ ಪತ್ರಗಳನ್ನು ಸಿದ್ಧಪಡಿಸಿರುವುದು ಬೆಳಕಿಗೆ ಬಂದಿದೆ. ನಂತರ ನ್ಯಾಯಾಲಯದ ಮಟ್ಟಿಲೇರಿದರೂ ಈ ಪ್ರಕರಣದಲ್ಲಿ ನ್ಯಾಯ ದೊರಕಿಲ್ಲ, ಹುಡುಗಿಯನ್ನು ಮನೆಯವರ ಜೊತೆ ಕಳುಹಿಸಲು ಕೋರ್ಟ್ ನಿರಾಕರಿಸಿದೆ ಎನ್ನಲಾಗಿದೆ.
ಬಂದೂಕು ತೋರಿಸಿ ಅಪಹರಣ
ಈ ವರ್ಷದ ಜೂನ್‌ನಲ್ಲಿ 14 ವರ್ಷದ ಹಿಂದೂ ಹುಡುಗಿಯನ್ನು ಕುಟುಂಬದವರ ಎದುರೇ ಬಂದೂಕು ತೋರಿಸಿ ಅಪಹರಿಸಿ ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆ ಮಾಡಿದ್ದಾರೆ. ಸಿಂಧ್‌ನ ಬೆನಜಿರಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಾರ್ಚ್ನಲ್ಲಿ ಇನ್ನೊಂದು ದುರ್ಘಟನೆ ನಡೆದಿದ್ದು, ಈ ಪ್ರಕರಣದಲ್ಲಿ ಅಪಹರಣ ಮತ್ತು ಮತಾಂತರದ ಪ್ರಯತ್ನವನ್ನು ವಿರೋಧಿಸಿದ್ದಕ್ಕಾಗಿ ಸಿಂಧ್‌ನ ರೋಹ್ರಿ ಪಟ್ಟಣದ ಹಿಂದೂ ಹುಡುಗಿಯೊಬ್ಬಳು ಹೀನಾಯವಾಗಿ ಕೊಲ್ಲಲ್ಪಟ್ಟಳು. ಪೊಲೀಸರಿಂದ ಯಾವುದೇ ಸಹಾಯ ಸಿಕ್ಕಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ.