Mangalore and Udupi news
ಪ್ರಸ್ತುತ

ಸಂರಕ್ಷಿತಾರಣ್ಯದಲ್ಲಿ 10 ಕಾಡಾನೆಗಳ ಅನುಮಾನಾಸ್ಪದ ಸಾವು

ಮಧ್ಯಪ್ರದೇಶದ ಭೋಪಾಲ್​ನಲ್ಲಿರುವ ಬಾಂಧವಗಢ ಹುಲಿ ಸಂರಕ್ಷಿತಾರಣ್ಯದಲ್ಲಿ 10 ಕಾಡಾನೆಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿವೆ. ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಭಾನುವಾರ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಕ್ಷೇತ್ರ ನಿರ್ದೇಶಕರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಬೆಳೆಗಳ ಮೇಲೆ ಸಿಂಪಡಿಸಿರುವ ಕೀಟನಾಶಕಗಳ ಮೇಲೆ ಅನುಮಾನ ಮೂಡಿತ್ತು, ಆದರೆ ಪ್ರಾಥಮಿಕ ಸಂಶೋಧನೆಗಳು ಬೆಳೆಗಳಿಗೆ ಕೀಟನಾಶಕ ಬಳಕೆಗೆ ಯಾವುದೇ ಪುರಾವೆಗಳನ್ನು ತೋರಿಸಿಲ್ಲ. 2-3 ದಿನಗಳಲ್ಲಿ ಮರಣೋತ್ತರ ಪರೀಕ್ಷೆಯ ವರದಿಯನ್ನು ಬರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರದಂದು ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ಬಳಿ ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನೀಡಲಾಗುವ ಎಕ್ಸ್‌ಗ್ರೇಷಿಯಾ ಪರಿಹಾರವನ್ನು ಹೆಚ್ಚಿಸಲಾಗಿದೆ. ಆನೆ ದಾಳಿಗೆ ಬಲಿಯಾದವರ ಪರಿಹಾರವನ್ನು 8 ಲಕ್ಷದಿಂದ 25 ಲಕ್ಷಕ್ಕೆ ಏರಿಸಲಾಗಿದೆ ಎಂದು ಮುಖ್ಯಮಂತ್ರಿ ಯಾದವ್ ಹೇಳಿದ್ದಾರೆ.

ಇದಕ್ಕೂ ಮುನ್ನ, ಅರಣ್ಯ ಮತ್ತು ಪರಿಸರ ಖಾತೆ ರಾಜ್ಯ ಸಚಿವ ದಿಲೀಪ್ ಅಹಿರ್ವಾರ್ ಮತ್ತು ಇಬ್ಬರು ಹಿರಿಯ ಅರಣ್ಯ ಅಧಿಕಾರಿಗಳು ಶನಿವಾರ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿ ಆನೆಗಳ ಸಾವಿನ ಬಗ್ಗೆ ತನಿಖೆ ನಡೆಸಿದರು. ಸಚಿವ ಅಹಿರ್ವಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಅರಣ್ಯ) ಅಶೋಕ್ ಬರ್ನ್‌ವಾಲ್ ಮತ್ತು ಅರಣ್ಯ ಪಡೆ ಮುಖ್ಯಸ್ಥ (ಎಚ್‌ಒಎಫ್‌ಎಫ್) ಅಸೀಮ್ ಶ್ರೀವಾಸ್ತವ ಅವರು ಸ್ಥಳದಿಂದ ಮಾಹಿತಿ ಸಂಗ್ರಹಿಸಿದರು. ಕೇಂದ್ರ ಪರಿಸರ ಸಚಿವಾಲಯವು ಇತ್ತೀಚಿನ ಆನೆಗಳ ಸಾವಿನ ಬಗ್ಗೆ ತನಿಖೆ ನಡೆಸಲು ತಂಡವನ್ನು ರಚಿಸಿದೆ.

The Union environment ministry has initiated an independent inquiry into the death of 10 elephants in Bandhavgarh Tiger Reserve of Madhya Pradesh and said preventive measures are being taken by state officials to avoid the possibility of such incidents.

Related posts

Leave a Comment