Mangalore and Udupi news
Blogಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಬಂಟ್ವಾಳ: ಬಡ ಕುಟುಂಬಕ್ಕೆ ಮನೆ ನಿರ್ಮಿಸಿದ ಮಿಥುನ್ ಪೂಜಾರಿ ಕಲ್ಲಡ್ಕ ನೇತೃತ್ವದ ತಂಡ

ಬಂಟ್ವಾಳ: ಮಳೆ ಬಿಸಿಲಿನಿಂದ ರಕ್ಷಣೆಪಡೆಯಲು ಸೂರು ಇಲ್ಲದ ನಿರ್ಗತಿಕ ಕುಟುಂಬಕ್ಕೆ “ಕಲ್ಲಡ್ಕದ ನಿತ್ಯ ಸೇವ ಸಂಜೀವಿನಿ” ಸೇವಾ ಕಾರ್ಯದ ಮೂಲಕ ಮಿಥುನ್ ಕಲ್ಲಡ್ಕ ಇವರ ಯುವಕರ ತಂಡದವರು ನಿರ್ಮಿಸಿದ ಮನೆಯ ಹಸ್ತಾಂತರ ಕಾರ್ಯ ಇಂದು ಕಲ್ಕಡ್ಕದ ಗೋಳ್ತಮಜಲು ಎಂಬಲ್ಲಿ ನಡೆದಿದ್ದು, ಆರ್.ಎಸ್.ಎಸ್.ಪ್ರಮುಖರಾದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಅವರ ಹಸ್ತದಿಂದ ನಡೆಯಿತು.ಗೋಳ್ತಮಜಲು ಗ್ರಾಮದ ತೋಟ ನಿವಾಸಿ ಲಕ್ಮೀ ಹಾಗೂ ಅವರ ಮಗಳು ಕಮಲ ಎಂಬವರ ಮನೆ ಬೀಳುವ ಹಂತದಲ್ಲಿದ್ದು, ಇದರ ರಿಪೇರಿ ಕಾರ್ಯಕ್ಕೆ ಹಣವಿಲ್ಲದೆ ಕಣ್ಣೀರು ಹಾಕುತ್ತಿದ್ದರು. ತಾಯಿ ಮಗಳ ಕಷ್ಟದ ಬದುಕನ್ನು ಹೇಳಿ ಕೇಳುವವರು ಯಾರು ಇಲ್ಲದ ಪರಿಸ್ಥಿತಿಯಲ್ಲಿ ಕಣ್ಣೀರು ಒರೆಸುವ ಕಾರ್ಯಕ್ಕೆ ಹಿಂದೂ ಸಂಘಟಯ ಕಾರ್ಯಕರ್ತ ಮಿಥುನ್ ಕಲ್ಲಡ್ಕ ಅವರ ಮೂಲಕ ಯುವಕರ ತಂಡ ಮಾಡಿದ್ದು, ದಾನಿಗಳ ಸಹಕಾರದಿಂದ ನಿರ್ಮಿಸಿದ ಮನೆಯನ್ನು ಇಂದು ಹಸ್ತಾಂತರ ಮಾಡಲಾಗಿದೆ.

ಶ್ರೀ ಗಣೇಶ್ ಮಂದಿರ ಗೋಳ್ತಮಜಲು , ಭಜರಂಗಿ ಸೇವಾ ಬ್ರಿಗೇಡ್ ಕಲ್ಲಡ್ಕ ಗೋಳ್ತಮಜಲು, ವಿಶ್ವ ಹಿಂದೂ ಪರಿಷತ್ ಭಜರಂಗದಳ ಕಲ್ಲಡ್ಕ ಗೋಳ್ತಮಜಲು ಇವರ ನೇತ್ರತ್ವದಲ್ಲಿ ಊರ,ಪರ ಊರ ಹಾಗೂ ಸಂಘ ಸಂಸ್ಥೆಗಳ ದಾನಿಗಳ ಸಹಕಾರದಿಂದ ಮಿಥುನ್ ಕಲ್ಲಡ್ಕ ನೇತ್ರತ್ವದಲ್ಲಿ ” ನಿತ್ಯ ಸೇವ ಸಂಜೀವಿನಿ ” ಎಂಬ ನಾಮಾಂಕಿತ ಮನೆಯ ನಿರ್ಮಾಣವಾಗಿದೆ.

ಕಳೆದ ಐದು ತಿಂಗಳ ಹಿಂದೆ ಅಂದರೆ ಜುಲೈ 13ರಂದು ಹೊಸ ಮನೆ ನಿರ್ಮಾಣಕ್ಕೆ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಶಿಲಾನ್ಯಾಸ ಮಾಡಲಾಗಿತ್ತು.

ಮಳೆ ಬಿಸಿಲನ್ನು ಲೆಕ್ಕಿಸದೆ ಯುವಕರ ತಂಡ ಕೆಲಸ ಮಾಡಿ ಕೇವಲ ಐದು ತಿಂಗಳ ಅಂತದರದಲ್ಲಿ ಸುಮಾರು 8 ಲಕ್ಷ ವೆಚ್ಚದಲ್ಲಿ ಸುಂದರವಾದ ಮತ್ತು ವ್ಯವಸ್ಥಿತವಾದ ಮನೆಯ ನಿರ್ಮಿಸಿ ಇದೀಗ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ. ರಸ್ತೆಯಲ್ಲಿದ ಜಾಗದಲ್ಲಿ ಮನೆಯ ನಿರ್ಮಾಣವಾಗಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದ್ದ ತಂಡಕ್ಕೆ ಇದೊಂದು ಸವಾಲಿನ ಕೆಲಸವಾಗಿತ್ತು.ಅಂದಾಜು ಒಂದು ಕಿ.ಮೀ.ದೂರದಿಂದ ಕಲ್ಲು ,ಮರಳು,ಸಹಿತ ಮನೆಗೆ ನಿರ್ಮಾಣಕ್ಕೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಯುವಕರ ತಂಡ ತಲೆಯಲ್ಲಿ ಹೊತ್ತು ಸಾಗಿಸಿ ಮನೆ ನಿರ್ಮಾಣಮಾಡಿದ್ದಾರೆ.ಯುವಕರ ಈ ಕಾರ್ಯಕ್ಕೆ ಗ್ರಾಮಸ್ಥರಿಂದ ಪ್ರಶಂಸೆಯನ್ನು ಗಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ “ವಿವೇಕಾನಂದರ ಪ್ರಕಾರ ನಮ್ಮ ದೇಶದ ಮೂಲ ಚಿಂತನೆಯಿರುವುದು ತ್ಯಾಗ ಮತ್ತು ಸೇವೆಯಲ್ಲಿ , ಸೇವೆ ಮಾಡಬೇಕಾದರೆ ತ್ಯಾಗ ಮಾಡಬೇಕು. ಅಂತಹ ಕಾರ್ಯವನ್ನು ಕಲ್ಲಡ್ಕದ ಸ್ಥಾನೀಯ ಭಜರಂಗದಳದ ಕಾರ್ಯಕರ್ತರು ಹಾಗೂ ಊರವರು ಸೇರಿ ಅನಾಥರಾಗಿದ್ದ ಲಕ್ಮೀ ಹಾಗೂ ಅವರ ಮಗಳಿಗೆ ಒಂದು ಒಳ್ಳೆಯ ಮನೆ ಕಟ್ಟಿಕೊಟ್ಟಿದ್ದಾರೆ. ಎಲ್ಲದಕ್ಕಿಂತ ಹೆಚ್ಚು ಉಳಿಕೊಳ್ಳಲು ಒಂದು ಮನೆ ಬೇಕು ಅಮೇಲೆ ಆಹಾರ ಬೇಕು ,ಹಾಗಾಗಿ ಉಳಿದುಕೊಳ್ಳಲು ಒಳ್ಳೆಯ ಜಾಗ ಮಾಡಿಕೊಟ್ಟಿರುವ ತ್ಯಾಗ ಸೇವೆಯ ಗುರುತಾಗಿ ಭಜರಂಗದಳವು ಉತ್ತಮ‌ಕಾರ್ಯ ಮಾಡಿದೆ ಭಜರಂಗದಳವು ಹಿಂದೂ ಸಮಾಜಕ್ಕೋಸರ ಇಂತಹ ಕೆಲಸವನ್ನೇ ಮಾಡಬೇಕಾಗಿದೆ” ಎಂದು ಹೇಳಿದರು.

ಮಿಥುನ್ ಪೂಜಾರಿ ಕಲ್ಲಡ್ಕ ಮಾತನಾಡಿ “ನಿತ್ಯ ಸೇವ ಸಂಜೀವಿನಿ ಎಂಬ ಘೋಷ ವಾಕ್ಯದ ಮೂಲಕ ನಿರಂತರವಾಗಿ ಸಾಮಾಜಿಕ ಸೇವಾ ಕಾರ್ಯಕ್ಕೆ ನಮ್ಮ ತಂಡ ಮುನ್ನಡಿ ಇಟ್ಟಿದೆ. ಗೋಳ್ತಮಜಲು ಲಕ್ಮೀ ಅಮ್ಮನವರಿಗೆ ಸೂರು ನಿರ್ಮಿಸುವ ಕಾರ್ಯದ ಮೂಲಕ ನಮ್ಮ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ನಿತ್ಯ ಸೇವ ಸಂಜೀವಿನಿ ಎಂಬ ಘೋಷ ವಾಕ್ಯದ ಮೂಲಕ ಸಮಾಜದಲ್ಲಿ ದೀನದಲಿತರ ಮತ್ತು ಬಡವರ ಕಣ್ಣೀರೊರಸುವ ಕಾರ್ಯ ಮಾಡುವುದಕ್ಕೆ ನಾವು ಸದಾ ಸಿದ್ದ ಮತ್ತು ಬದ್ದರಿದ್ದೇವೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ‌ಶ್ಯಾಮ್ ಭಟ್ ತೋಟ, ಗೋಪಾಲಕೃಷ್ಣ ಭಟ್ ಸರ್ವೇಶ್ವರಿ,ಈಶ್ವರ ಭಟ್, ಚಂದ್ರಶೇಖರ ಟೈಲರ್ ಗೋಳ್ತಮಜಲು, ಸುಂದರ ಶೆಟ್ಟಿ, ಗ್ರಾ.ಪಂ.ಅಧ್ಯಕ್ಷೆ ಪ್ರೇಮಾಪುರುಷೋತ್ತಮ್, ಸದಸ್ಯರಾದ ಪುರುಷೋತ್ತಮ ಗೋಳ್ತಮಜಲು, ಸರೋಜಿನಿ ಶೆಟ್ಟಿ, ನಳಿನಾಕ್ಷಿ ಡೊಂಬಯ್ಯ, ಭಜರಂಗದಳದ ಪ್ರಮುಖರಾದ ಕೃಷ್ಣಪ್ಪ ಕಲಡ್ಕ,ಸಚಿನ್ ಮೆಲ್ಕಾರ್, ಅಮಿತ್ ಅಂಚನ್ ಕಲ್ಲಡ್ಕ, ತಿಲಕ್ ರಾಜ್, ಪ್ರಮುಖರಾದ ಮುತ್ತಪ್ಪ ಪೂಜಾರಿ,ಮೋಹನ್ ದಾಸ ಕಲ್ಲಡ್ಕ,ಮಹೇಶ್ ಅನಂತಾಡಿ,ನಾಗರಾಜ್ ಬಲ್ಯಾಯ ಕಲ್ಲಡ್ಕ ನಾಗಸುಜ್ಞಾನ, ಹಾಗೂ ಸಂಘಟನೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Comment