
ಮಂಗಳೂರು : ಇಂದಿನಿಂದ ಮಂಗಳೂರು ನಗರದ ಲೋವರ್ ಕ್ಯಾರ್ ಸ್ಟ್ರೀಟ್ ನ ಕಾಳಿಕಾಂಬಾ ದೇವಸ್ಥಾನದ ರಸ್ತೆಯಲ್ಲಿ ನೂತನ “ಸ್ವಸ್ತಿಕ್” ಹೋಟೆಲ್ ಶುಭಾರಂಭಗೊಂಡಿದೆ.
ಶ್ರೀ ವೇದಮೂರ್ತಿ ವಿವೇಕಾನಂದ ನೀಗ್ಲೆ, ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಮೋಕ್ತೆಸರವರ ದಿವ್ಯ ಹಸ್ತ ದಿಂದ ಗಣಹೋಮ ನೆರವೇರಿಸಲಾಗಿದ್ದು ಹಾಗೂ ದೀಪಪ್ರಜ್ವಲನೆ ಮೂಲಕ ಪ್ರಾರಂಭ ಗೊಂಡಿರುತ್ತದೆ.
ಈ ಕಾರ್ಯಕ್ರಮಕ್ಕೆ ಮಾಲಕರಾದ ಶ್ರೀ ವಿಶ್ವನಾಥ್ ಮೂಲ್ಯ ಹಾಗೂ ಶ್ರೀಮತಿ ರೋಹಿಣಿ ವಿಶ್ವನಾಥ್ ರವರ ಉಪಸ್ಥಿತಿಯಲ್ಲಿ ನಡೆದಿದ್ದು, ಕಾರ್ಯಕ್ರಮ ದಲ್ಲಿ ಶ್ರೀ ಮೋಹಿತ್ ಕುಲಾಲ್, ಶ್ರೀ ಸುದೇಶ್ ಕುಮಾರ್, ಶ್ರೀಮತಿ ಕೃತಿ ಮೂಲ್ಯ ಮತ್ತು ಶ್ರೀಮತಿ ಸ್ವಾತಿ ಮೂಲ್ಯ ರವರು ಹಾಜರಿದ್ದರು.
ದಿನಾಂಕ 16-12-2024 ರಿಂದ ಸ್ವಸ್ತಿಕ್ ಹೋಟೆಲ್ ಕಾರ್ಯರಂಭ ಗೊಳ್ಳಲಿದ್ದು ಬೆಳಗಿನ ಚಾ, ಕಾಫಿ ಹಾಗೂ ವಿವಿಧ ಬಗೆಯ ತಿಂಡಿ ಖಾದ್ಯಗಳು ಲಭ್ಯವಿದ್ದು, ಮದ್ಯಾಹ್ನ ಮನೆ ಅಡುಗೆ ನೆನಪಿಸುವ ರುಚಿ ರುಚಿಯಾದ ಬಾಳೆ ಎಲೆಯ ಮೀನಿನ ಊಟ, ಮಾಂಸಾಹಾರಿ ಮತ್ತು ಗಂಜಿ ಊಟ ಲಭ್ಯವಿರುತ್ತದೆ.