ಕಲ್ಲಡ್ಕ : ನಾಗ ಸುಜ್ಞಾನ ಫ್ರೆಂಡ್ಸ್ ನ 6 ನೇ ವರ್ಷದ ಹುಲಿ ವೇಷದ ಪೋಸ್ಟರ್ ಶ್ರೀ ನಿತ್ಯಾನಂದ ಆಶ್ರಮ ಕಾನ್ಹಾಂಗಡ್ ನಲ್ಲಿ ಪ್ರಮುಖರ ಉಪಸ್ಥಿತಿಯಲ್ಲಿ ಸೆ.14ರಂದು ಬಿಡುಗಡೆಗೊಳಿಸಲಾಯಿತು.
ಹೋಟೆಲ್ ಲಕ್ಷ್ಮೀ ಗಣೇಶ್ ಇದರ ಸಹಕಾರದೊಂದಿಗೆ ನಾಗರಾಜ್ ಕಲ್ಲಡ್ಕ ನೇತೃತ್ವದಲ್ಲಿ ಶ್ರೀ ನಾಗ ಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ಇದರ 6ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ 6ನೇ ವರ್ಷದ ಸಾಂಪ್ರದಾಯಿಕ ದಸರಾ ಹುಲಿಗಳು 2024 ಕಾರ್ಯಕ್ರಮ 10-10-2024 ಗುರುವಾರ ನಡೆಯಲಿದೆ.
ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮಕ್ಕಳಿಗೆ ಬಾಲ ಭೋಜನ ನಂತರ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ಸಂಘದ ಸ್ಥಾಪಕಾಧ್ಯಕ್ಷ ನಾಗರಾಜ್ ಕಲ್ಲಡ್ಕ, ಹಿಂದೂ ಸಂಘಟನೆಯ ಪ್ರಮುಖರಾದ ಮಿಥುನ್ ಕಲ್ಲಡ್ಕ ಹಾಗೂ ಕಾರ್ಯಕರ್ತರು ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.