ಮಂಗಳೂರು: ಮಂಗಳೂರು ಗಣೇಶೋತ್ಸವಕ್ಕೆ ಅವೇಶಂ ಚಿತ್ರದ ರಂಗ ಆಗಮಿಸಿದ್ದಾರೆ ಎನ್ನುವಂತೆ ಮೆರವಣಿಗೆಯಲ್ಲಿ ವೇಷಧಾರಿಯೊಬ್ಬರು ಎಲ್ಲರನ್ನೂ ರಂಜಿಸಿದ ಘಟನೆ ನಡೆದಿದೆ. ಆವೇಶಂ ಸಿನಿಮಾ ಮೂಲಕ ಎಲ್ಲರ ಗಮನ ಸೆಳೆದಿರುವ ರಂಗ ಮಂಗಳೂರಿಗೆ ಬಂದಿದ್ರ ಎಂಬ ಪ್ರಶ್ನೆಯೂ ಉಂಟಾಗಿದೆ.
ಗುಣಕರ ಶೆಟ್ಟಿ ಸೇವಾ ಸಮಿತಿ ಹಿ೦ದೂ ಯುವಸೇನೆ ಛತ್ರಪತಿ ಶಾಖೆ ಪರಂಜ್ಯೋತಿನಗರ ಅಳಪೆ ಇವರ ವತಿಯಿಂದ ಆಯೋಜಿಸಿದ್ದ ಸ್ತಬ್ಧ ಚಿತ್ರ ಎಲ್ಲರ ಗಮನ ಸೆಳೆದಿದೆ. ಗಣೇಶೋತ್ಸವ ಸಂಭ್ರಮದಲ್ಲಿ ಆವೇಶಂನ ರಂಗ ನೆನಪು ತರಿಸುವಂತೆ ವೇಷಧಾರಿ ಎಲ್ಲರನ್ನೂ ರಂಜಿಸಿದ್ದಾರೆ.
ಮೆರವಣಿಗೆಯಲ್ಲಿ ಆವೇಶಂನ ರಂಗನಾಗಿ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಆವೇಶಂನ ರಂಗನಂತೆ ಬಿಳಿ ಉಡುಪು, ಕೊರಳಿಗೆ ಆಭರಣ, ಕಪ್ಪು ಕನ್ನಡಕ ಧರಿಸಿ ಮಿಂಚಿದ್ದಾರೆ. ಥೇಟ್ ರಂಗನಂತೆ ಪೋಸ್ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.
ಗುಣಕರ ಶೆಟ್ಟಿ ಸೇವಾ ಸಮಿತಿ ಹಿ೦ದೂ ಯುವಸೇನೆ ಛತ್ರಪತಿ ಶಾಖೆ ಪರಂಜ್ಯೋತಿನಗರ ಅಳಪೆ ಇವರು ಏರ್ಪಡಿಸಿದ್ದ ಸ್ತಬ್ಧ ಚಿತ್ರ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.