ಮಂಗಳೂರು: ಉದ್ಯೋಗದ ಭರವಸೆ ನೀಡಿ ಅಮಾಯಕರಿಗೆ ಲಕ್ಷಗಟ್ಟಲೇ ವಂಚಿಸದ ಘಟನೆ ನಡೆದಿದೆ. ಮಾತಿನಲ್ಲೇ ಎಲ್ಲರನ್ನು ಮೋಸ ಮಾಡಿ ತನ್ನ ಬಲೆಗೆ ಹಾಕುವ ನಯವಂಚಕನ ಬಣ್ಣ ಬಯಲಾಗಿದೆ.
ಈತನ ಹೆಸರು ಅವಿನಾಶ್ ಶೆಟ್ಟಿ ಇವನು ಉದ್ಯೋಗ ನೀಡುವ ಭರವಸೆ ನೀಡಿ ಬಡವರ ಬುದುಕಿನ ಜೊತೆ ಚೆಲ್ಲಾಟವಾಡಿದ ಘಟನೆ ಬೆಳಕಿಗೆ ಬಂದಿದೆ. ಎಂ.ಆರ್.ಪಿ.ಎಲ್ ನಲ್ಲಿ ಹಾಗೂ ನಂದಿನಿ ಡೈರಿ(ಕೆಎಮ್‌ಎಫ್)ನಲ್ಲಿ ಉದ್ಯೋಗ ಕೊಡಿಸುವುದಾಗಿ ಸುಮಾರು ಜನರಿಂದ ಲಕ್ಷಗಟ್ಟಲೇ ಹಣ ಲಪಟಯಿಸದ್ದಾನೆ. ಈತನ ಶೋಕಿ ಜೀವನಕ್ಕೆ ಎಷ್ಟೋ ಮಂದಿ ಬಡವರು ತಮ್ಮ ಮನೆಯನ್ನು ಮಾರಿ, ಎಷ್ಟೋ ಮಂದಿ ತಮ್ಮ ಒಡವೆಯನ್ನು ಮಾರಿ ಈತನಿಗೆ ಕೊಟ್ಟು ಈಗ ಮೋಸ ಹೋಗಿದ್ದಾರೆ.
ಈತನ ವಿರುದ್ಧ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶೀಲ ಎಂಬವರಿಗೆ ಮಂಗಳೂರಿನ ಕುಲಶೇಖರ ಬಳಿ ಇರುವ ನಂದಿನಿ ಡೈರಿ ಯಲ್ಲಿ ಅಕೌಂಟೆoಟ್ ಹುದ್ದೆಯನ್ನು ದೊರಕಿಸಿ ಕೊಡುವುದಾಗಿ ಆರೋಪಿ ಅವಿನಾಶ್ ಶೆಟ್ಟಿ ನಂಬಿಸಿ, 2,13,684 ರೂಪಾಯಿ ಮೊತ್ತವನ್ನು ಪಾವತಿಸಿದರೆ ಉದ್ಯೋಗವನ್ನು ದೊರಕಿಸಿಕೊಡುವ ಭರವಸೆಯನ್ನು ನೀಡಿ ದಿನಾಂಕ 06-09-2024 ರಂದು ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿರುವ ಮಂಗಳೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ನಲ್ಲಿರುವ ಎಸ್ ಬಿ ಖಾತೆ ಯಿಂದ ಮೊತ್ತವನ್ನು ಆರೋಪಿ ಅವಿನಾಶ್ ಶೆಟ್ಟಿಯ ಕರ್ನಾಟಕ ಬ್ಯಾಂಕ್ ಪಂಪ್ವೆಲ್ ಖಾತೆಯಲ್ಲಿರುವ ಖಾತೆಗೆ 2.13.684ರೂ ವರ್ಗಾಯಿಸಿಕೊಂಡು ಮೋಸ ಮಾಡಿದ ಬಗ್ಗೆ ದೂರು ದಾಖಲಾಗಿದೆ.
ಜನರೇ.. ಎಚ್ಚರದಿಂದಿರಿ… ಎಂ ಆರ್ ಪಿ ಎಲ್ ನಲ್ಲಿ ಉದ್ಯೋಗ ನೀಡುತ್ತೇನೆ ಅಂತ ನಿಮ್ಮ ಮನೆಯನ್ನು ಲೂಟಲು ಬರುತ್ತಾನೆ ಈ ದರೋಡೆಕೋರ ಅವಿನಾಶ್ ಶೆಟ್ಟಿ. ಈತ ಶೆಟ್ಟಿ ಎಂಬುವುದೇ ಅನೇಕ ಮಂದಿಗೆ ಅನುಮಾನವಿದೆ. ನೋಡಲು ಒಳ್ಳೆ ಕಳ್ಳರಂತೆ ಮಸಿಬಣ್ಣವನ್ನು ಹೊಂದಿದ್ದಾನೆ. ತನ್ನ ಮಾತಿನಲ್ಲಿ ಎಲ್ಲರನ್ನು ಮೋಸ ಮಾಡಿ ಬಲೆಗೆ ಹಾಕುವ ನಯವಂಚಕ. ಎಷ್ಟೋ ಮಂದಿ ಬಡವರು ಸಾಲಗಳನ್ನ ಮಾಡಿ ಮೋಸ ಹೋಗಿದ್ದಾರೆ. ಇತ್ತ ಹಣ ಕೊಟ್ಟದ್ದಕ್ಕೆ ದಾಖಲೆ ಇಲ್ಲದೆ ಕೇಸ್ ಮಾಡಲು ಆಗದೆ ಪರದಾಡುತ್ತಿದ್ದಾರೆ.
ಒಂದು ಸಲ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದ ಈ ಪಾಪಿ ಹೊರ ಬಂದು 3, 5 ಲಕ್ಷದಂತೆ ಪಂಗನಾಮ ಹಾಕಿದ್ದಾನೆ. ಈತ ಎಲ್ಲಿ ತನಕ ಕಿಲಾಡಿ ಅಂದರೆ ವಂಚನೆಗೆ ಒಳಗಾದವರು ಈತನ ಬಳಿ ಬರುತ್ತಾರೆ ಎಂದು ಮನೆಯಲ್ಲಿ ಒಂದು ದೊಡ್ಡ ನಾಯಿಯನ್ನು ಬೇರೆ ಸಾಕಿದ್ದಾನೆ. ವಂಚನೆಗೊಳಗಾದವರು ಒಳಗೆ ಬರದೆ ಗೇಟ್ ಬಳಿಯೇ ಬೊಬ್ಬೆ ಹೊಡೆಯುವಂತ ಪರಿಸ್ಥಿತಿ. ಮೊನ್ನೆ ಒಂದು ಕುಟುಂಬ ಯಾವುದೋ ಒಂದು ದೂರದ ಹಳ್ಳಿಯಿಂದ ಬಂದು ಸಂಜೆ ತನಕ ಇವನ ಮನೆಯ ಗೇಟ್ ನ ಹೊರಗೆ ಕಾದು ಕುಳಿತುಕೊಂಡಿತ್ತು ಎನ್ನಲಾಗಿದೆ.
ಸದ್ಯ ಈತನ ವಿರುದ್ಧ ಉರ್ವ ಪೊಲೀಸ್ ಸ್ಟೇಷನ್ ನಲ್ಲಿ ಒಂದು ದೂರು, ದಾಖಲಾಗಿದೆ. “ಈತ ಬಣ್ಣಬಣ್ಣದ ಮಾತನಾಡುತ್ತಾನೆ ದಯವಿಟ್ಟು ಅದನ್ನು ನಂಬಬೇಡಿ. ದಾಖಲೆ ಸಮೇತ ಈತನ ಮೇಲೆ ಕಂಪ್ಲೇAಟ್ ಕೊಡಿ. ಇಲ್ಲದಿದ್ದರೆ ಈತ ಮತ್ತೆ ತನ್ನ ಚಾಳಿಯನ್ನು ಮುಂದುವರಿಸಿ ಇನ್ನು ಅನೇಕ ಮಂದಿಯನ್ನು ದೋಚುತ್ತಾನೆ ಎಚ್ಚರ..” ಎಂಬAತೆ ಈತನ ಪೋಟೋ ಜೊತೆ ಬರಹ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
