
ಉಳ್ಳಾಲ : ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ನಾಟೆಕಲ್ ಸಮೀಪದ ತಿಬ್ಲಪದವು ಸಂಭವಿಸಿದೆ.
ಮೃತಪಟ್ಟ ಯುವಕನನ್ನು ದೇರಳಕಟ್ಟೆ ನಿವಾಸಿ ಮೆಡಿಕಲ್ ಸೆಂಟರ್ ಮಾಲೀಕ ಜಲೀಲ್ ಎಂಬವರ ಪುತ್ರ ಅವ್ಸಾಫ್ (25) ಎಂದು ಗುರುತಿಸಲಾಗಿದೆ.
ಜ.06ರ ಮಧ್ಯಾಹ್ನ ದೇರಳಕಟ್ಟೆ ಕಡೆಯಿಂದ ತಿಬ್ಲಪದವು ಕಡೆಗೆ ಬೈಕಿನಲ್ಲಿ ತೆರಳುವ ಸಂದರ್ಭ ತಿಬ್ಲಪದವು ಸಮೀಪ ಡಿವೈಡರ್ ಸಮೀಪ ಲಾರಿಯೊಂದ ಹಠಾತ್ತನೆ ತಿರುಗಿದ ಪರಿಣಾಮ ಲಾರಿ ಹಿಂಬದಿಗೆ ಬೈಕ್ ಡಿಕ್ಕಿ ಹೊಡೆದು ಅವ್ಸಾಫ್ ಸಾವನ್ನಪ್ಪಿದ್ದಾರೆ.
ಕೆಲ ವರ್ಷಗಳ ಹಿಂದಷ್ಟೇ ಕಲಿಕೆ ಮುಗಿಸಿ ಅವ್ಸಾಫ್ ದೇರಳಕಟ್ಟೆ ಜಂಕ್ಷನ್ ನಲ್ಲಿ ಮೆಡಿಕಲ್ ಅಂಗಡಿಯನ್ನು ನಡೆಸುತ್ತಿದ್ದರು. ಘಟನೆ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತ ಸಿಸಿಟಿವಿ ವೀಡಿಯೋ ಸೆರೆಯಾಗಿದೆ.