Mangalore and Udupi news
ಕಾಸರಗೋಡುಗ್ರೌಂಡ್ ರಿಪೋರ್ಟ್ಪ್ರಸ್ತುತ

ಕೆರೆಗೆ ಬಿದ್ದು ತಾಯಿ ಮತ್ತು 2 ವರ್ಷದ ಮಗು ಸಾವು.!

ಕೆರೆಗೆ ಬಿದ್ದು ತಾಯಿ ಮತ್ತು ಮಗು ಸಾವನಪ್ಪಿದ ಘಟನೆ ಕೇರಳದ ಉಕ್ಕಿನಡ್ಕ ಬಳಿಯ ಎಳ್ಕನದ ಅಡಿಕೆ ತೋಟದಲ್ಲಿರು ಕೊಳದಲ್ಲಿ ನಡೆದಿದೆ.

ಮೃತರನ್ನು ಎಳ್ಕನದ ದಟ್ಟಿಗೆ ಮೂಲೆ ನಿವಾಸಿಗಳಾದ ಪರಮೇಶ್ವರಿ (42) ಮತ್ತು ಅವರ ಪುತ್ರಿ ಪದ್ಮಿನಿ (2) ಎಂದು ಗುರುತಿಸಲಾಗಿದೆ.

ಪರಮೇಶ್ವರಿಯವರ ಪತಿ ಮತ್ತು ಮಗ ಬೆಳಿಗ್ಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮನೆಯಿಂದ ಹೊರಟಿದ್ದರು. ಸಂಜೆ ಹಿಂತಿರುಗಿದಾಗ, ತಾಯಿ ಮತ್ತು ಮಗು ಇಬ್ಬರೂ ಕಾಣೆಯಾಗಿರುವುದು ಕಂಡುಬoದಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ, ಅವರ ಶವಗಳು ಕೊಳದಲ್ಲಿ ಪತ್ತೆಯಾಗಿವೆ.

ವಿಷಯ ತಿಳಿದ ಸ್ಥಳೀಯರು ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ಸಾಗಿಸಿದರು, ಆದರೆ ಅಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಅವರು ಮುಂಜಾನೆ ಕೆರೆಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಅವರ ಸಾವಿಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮಗು ಆಟವಾಡುವಾಗ ಆಕಸ್ಮಿಕವಾಗಿ ಕೆರೆಗೆ ಜಾರಿರಬಹುದೆಂದು ಶಂಕಿಸಲಾಗಿದೆ. ಇದನ್ನು ನೋಡಿದ ತಾಯಿ ಆಕೆಯನ್ನು ರಕ್ಷಿಸಲು ಕೆರೆಗೆ ಹಾರಿರಬಹುದು, ಆದರೆ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಘಟನೆಯ ಕುರಿತು ಬದಿಯಡ್ಕ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Related posts

Leave a Comment