Mangalore and Udupi news
ಅಪರಾಧದೇಶ- ವಿದೇಶಪ್ರಸ್ತುತ

ಹೆಂಡತಿ ಕಾಟ. ಕಿರುಕುಳಕ್ಕೆ ಬೇಸತ್ತು ಐಟಿ ಉದ್ಯೋಗಿ ಆತ್ಮಹತ್ಯೆಗೆ ಶರಣು.!!


ಉತ್ತರ ಪ್ರದೇಶದ ಆಗ್ರಾದಲ್ಲಿ ಐಟಿ ಕಂಪನಿ ಮ್ಯಾನೇಜರ್ ಮಾನವ್ ಶರ್ಮಾ ಎಂಬಾತ ಪತ್ನಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನವ್​​ ಶರ್ಮಾ ಲೈವ್​ ಬಂದು ಸೂಸೈಡ್​ ಮಾಡಿಕೊಂಡಿದ್ದು, ಇದು ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

ಆಗ್ರಾದ ಡಿಫೆನ್ಸ್​ ಕಾಲೊನಿಯಲ್ಲಿ ದುರ್ಘಟನೆ ನಡೆದಿದೆ. ಮಾನವ್ ಶರ್ಮಾ ಟಿಸಿಎಸ್​​ ಐಟಿ ಕಂಪನಿಯಲ್ಲಿ ಮ್ಯಾನೇಜರ್​ ಆಗಿದ್ದರು. ಮೂರು ದಿನಗಳ ಹಿಂದೆ ಫೆ. 24ರಂದು ಮಾನವ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯೋ ಮುನ್ನ ಒಂದು ವಿಡಿಯೋ ಮಾಡಿದ್ದು, ತನ್ನೀ ನಿರ್ಧಾರಕ್ಕೆ ಪತ್ನಿಯೇ ಕಾರಣ ಎಂದಿದ್ದಾರೆ.

“ನಾನು ಸಾಯಲು ನನ್ನ ಹೆಂಡತಿಯೇ ಕಾರಣ. ಅಪ್ಪಾ, ಅಮ್ಮ ನನ್ನನ್ನು ಕ್ಷಮಿಸಿ. ನನ್ನ ತಂದೆ ತಾಯಿಗೆ ಯಾರು ತೊಂದರೆ ಕೊಡಬೇಡಿ. ನನ್ನ ಹೆಂಡತಿಯ ಕಿರುಕುಳದಿಂದ ಬೇಸತ್ತು ಹೋಗಿದ್ದೇನೆ. ಸಾವು ಬಿಟ್ಟು ಬೇರೆ ಯಾವ ದಾರಿ ಇಲ್ಲ. ಪುರುಷರಿಗಾಗಿ ದೇಶದಲ್ಲಿ ಯಾವುದೇ ಕಾನೂನಿಲ್ಲ. ಇನ್ನಾದ್ರೂ ಪುರುಷರನ್ನು ರಕ್ಷಿಸಲು ಕಾನೂನು ರಚಿಸಿ” ಎನ್ನುತ್ತಾ ಲೈವ್​​ನಲ್ಲಿ ತನ್ನ ನೋವು ತೋಡಿಕೊಂಡರು ಮಾನವ್​ ಶರ್ಮಾ.

ಕಳೆದ ವರ್ಷವಷ್ಟೇ ಮಾನವ್​ಗೆ ಮದುವೆಯಾಗಿತ್ತು. ಕೆಲಸದ ಕಾರಣ ಮಾನವ್​ ತನ್ನ ಹೆಂಡತಿಯನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದ. ಇಬ್ಬರ ಮಧ್ಯೆ ಪ್ರತಿದಿನ ಜಗಳ ನಡೆಯುತ್ತಿತ್ತು. ತನ್ನ ಹಳೆಯ ಪ್ರೇಮಿ ಜೊತೆಗೆ ಹೆಂಡತಿ ಅಕ್ರಮ ಸಂಬಂಧ ಹೊಂದಿದ್ದಳು. ಇದರಿಂದ ಬೇಸತ್ತ ಮಾನವ್​​​ ನೇಣಿಗೆ ಶರಣಾಗಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.

Advertisement

Related posts

Leave a Comment