Mangalore and Udupi news
ಅಪರಾಧಪ್ರಸ್ತುತಮಂಗಳೂರುರಾಜಕೀಯ

ಮಂಗಳೂರು: ಕಾಂಗ್ರೆಸ್ ಕಛೇರಿಯಲ್ಲೇ ಹೊಡೆದಾಟ..! ಕಾರಣವೇನು?

ಮಂಗಳೂರು: ಕಾಂಗ್ರೆಸ್ ಪಕ್ಷ ಕಛೇರಿಯಲ್ಲೇ ನಾಯಕರು ಹೊಡೆದಾಡಿಕೊಂಡ ಘಟನೆ ವರದಿಯಾಗಿದೆ. ನಗರದ ಮಲ್ಲಿಕಟ್ಟೆ ಬಳಿ ಇರುವ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮುಖಂಡರು ಹೊಡೆದಾಡಿಕೊಂಡಿದ್ದಾರೆ. ಪಂಚಾಯಿತಿ ಉಪಚುನಾವಣೆಯಲ್ಲಿ ಆಯ್ಕೆಯಾದವರನ್ನು ಸನ್ಮಾನಿಸುವ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ನಂತರ ಹೊಡೆದಾಟಕ್ಕೆ ತಿರುಗಿದೆ.

ಮೊದಲಿಗೆ ಕಾಂಗ್ರೆಸ್ ಮುಖಂಡ ಪ್ರಕಾಶ್ ಶೆಟ್ಟಿ ತುಂಬೆಗೆ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಹೊಡೆದಿದ್ದಾರೆ. ಇದೇ ವೇಳೆ, ತಿರುಗಿಸಿ ಹರೀಶ್‌ಗೆ ಹೊಡೆಯಲು ಪ್ರಕಾಶ್ ಶೆಟ್ಟಿ ಮುಂದಾಗಿದ್ದಾರೆ. ಘಟನೆ ಬೆನ್ನಲ್ಲೇ ಕಾಂಗ್ರೆಸ್ ಕಚೇರಿಗೆ ಪೊಲೀಸರು ಆಗಮಿಸಿದ್ದಾರೆ. ಸೆಂಟ್ರಲ್ ಎಸಿಪಿ ಮತ್ತು ಕದ್ರಿ ಪೊಲೀಸರು ಆಗಮಿಸಿದ್ದಾರೆ. ಘಟನೆ ಆಗುತ್ತಿದ್ದಂತೆ ಕಾಂಗ್ರೆಸ್ ಕಚೇರಿ ಬಳಿ ಕಾರ್ಯಕರ್ತರು ಜಮಾಯಿಸಿದ್ದಾರೆ.

ಕಾಂಗ್ರೆಸ್ ನಾಯಕರ ಮಧ್ಯೆ ಸಂಧಾನ ನಡೆಯಿತಾದರೂ ನಂತರವೂ ಕಚೇರಿ ಬಳಿ ಕಾರ್ಯಕರ್ತರು ಜಮಾಯಿಸಿದರು. ಉಭಯ ನಾಯಕರ ತಂಡದ ಕಾರ್ಯಕರ್ತರು ಜಮಾಯಿಸಿದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಿದ್ದರು. ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿತ್ತು.

Related posts

Leave a Comment