ಉಡುಪಿ : ಮನೆಯ ಕೊಠಡಿಯಲ್ಲಿ ಯುವ ಕಲಾವಿದರೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೈಲಕೆರೆ ವಿದ್ಯೋದಯ ಶಾಲೆಯ ಸಮೀಪ ಸಂಭವಿಸಿದೆ.
ಆತ್ಮಹತ್ಯೆಗೈದಿರುವ ಯುವಕ ಬೈಲಕೆರೆಯ ರಾಮಕೃಷ್ಣ ದೇವಾಡಿಗರ ಪುತ್ರ, ವಾದ್ಯ ಕಲಾವಿದ ಅಶ್ವಥ್ (32) ಎಂದು ತಿಳಿದುಬಂದಿದೆ.
ಘಟನೆ ನಡೆದ ಕೆಲವು ಹೊತ್ತಿನಲ್ಲಿಯೇ ನೇಣುಕುಣಿಕೆಯಿಂದ ಇಳಿಸಿದ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಪರೀಕ್ಷಸಿದ ವೈದ್ಯರು ವ್ಯಕ್ತಿ ಅದಾಗಲೇ ಮೃತಪಟ್ಟಿರುವುದನ್ನು ದೃಢೀಕರಿಸಿದರು. ನಗರ ಪೊಲೀಸ್ ಠಾಣೆಯ ಎ. ಎಸ್. ಐ ಸುಭಾಸ್ ಕಾಮತ್, ಹೆಡ್ ಕಾನ್ಸೆಬಲ್ ಹರೀಶ್ ಮಾಳ, ಜಯಕರ್ ಸ್ಥಳಕ್ಕೆ ಆಗಮಿಸಿ ಕಾನೂನು ಪ್ರಕ್ರಿಯೆ ನಡೆಸಿದರು.
