ಉಡುಪಿ : ಸ್ಕೂಟರ್‌ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಉಡುಪಿ ಸೆನ್ ಪೊಲೀಸರು ಪೆರಂಪಳ್ಳಿ ಎಂಬಲ್ಲಿರುವ ಸಾಯಿರಾಧಾ ಟೌನ್‌ಶಿಪ್ ಬಳಿ ಬಂಧಿಸಿದ್ದಾರೆ.
ಉಡುಪಿ ಕೇಳಾರ್ಕಳಬೆಟ್ಟು ನಿವಾಸಿ ಅಬ್ದುಲ್ ಜಬ್ಬಾರ್ (27) ಬಂಧಿತ ಆರೋಪಿ.
ಈತನಿಂದ ಒಟ್ಟು 3,04,610ರೂ. ಮೌಲ್ಯದ 2 ಕೆ.ಜಿ 344 ಗ್ರಾಂ ಗಾಂಜಾ, ಸ್ಕೂಟರ್, 5810 ರೂ. ನಗದು, ಮೊಬೈಲ್ ಹಾಗು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಉಪನಿರೀಕ್ಷಕ ಪವನ್ ನಾಯಕ್, ಸಿಬ್ಬಂದಿ ಪ್ರವೀಣ್ ಕುಮಾರ್, ಪ್ರವೀಣ್, ವೆಂಕಟೇಶ್, ರಾಜೇಶ್, ಯತೀನ್ ಕುಮಾರ್, ಪ್ರಶಾಂತ್ ಮತ್ತು ಚರಣ್ ರಾಜ್ ಅವರನ್ನೊಳಗೊಂಡ ತಂಡವು ಈ ಕಾರ್ಯಾಚರಣೆ ನಡೆಸಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Udupi Sen police have arrested an accused who was transporting ganja on a scooter. Abdul Jabbar (27) is the arrested accused. 2 kg 344 grams ganja, scooter, cash of Rs 5810, mobile and other assets worth Rs 3,04,610 were seized from him.