ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದೆ. ನವೆಂಬರ್ 20 ರಂದು ಏಕಕಾಲದಲ್ಲಿ ಮಹಾರಾಷ್ಟçದ ಎಲ್ಲಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಏಕಕಾಲದಲ್ಲಿ 288 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಬಲ ಎರಡು ಬಣಗಳಾಗಿದೆ. 288 ವಿಧಾನಸಭಾ ಸ್ಥಾನಗಳ ಪೈಕಿ 234 ಸಾಮಾನ್ಯ ವರ್ಗದ ಅಡಿಯಲ್ಲಿ ಬರುತ್ತವೆ. 29 ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಮತ್ತು 25 ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಮೀಸಲಾಗಿದೆ.
ಈ ಬಾರಿ ಮಹಾ ಗದ್ದುಗೆ ಏರಲು ಕಾಂಗ್ರೆಸ್ ವಿಭಿನ್ನ ಅಸ್ತ್ರ ಪ್ರಯೋಗಿಸಿದೆ. ಬಿಜೆಪಿ ಈ ಹಿಂದೆ ಕೈಗೊಂಡ ನಿರ್ಧಾರವನ್ನೇ ಕೈ ಪಾಳಯ ಅನುಸರಿಸಿದೆ. ತಮ್ಮ ಬತ್ತಳಿಕೆಯಲ್ಲೇ ಇದ್ದ ಬಂಡಾಯ ಬಾಣಗಳನ್ನು ಮುರಿದು ಹಾಕಿದೆ. ಆ ಮೂಲಕ ಹೊಸ ಮುಖ ಹಾಗೂ ಸಕ್ರಿಯ ನಾಯಕರಿಗೆ ಮಣೆ ಹಾಕಲು ಮುಂದಾಗಿದೆ.
ಈ ಬಾರಿ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿಯಂತೆಯೇ ಕಾಂಗ್ರೆಸ್ ಕೂಡ ಬಂಡಾಯ ಅಭ್ಯರ್ಥಿಗಳನ್ನು ಅಮಾನತುಗೊಳಿಸಿದೆ. ಪಕ್ಷ ವಿರೋಧಿ ಚಟುವಟಿಕೆಗಾಗಿ ಮಹಾರಾಷ್ಟ್ರ ಕಾಂಗ್ರೆಸ್ 28 ಬಂಡಾಯ ಅಭ್ಯರ್ಥಿಗಳನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಿದೆ. ಇದರಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ಹೊಸ ಮುಖಗಳ ಪರಿಚಯ ಆಗಲಿದೆ. ಕೆಲವೊಂದು ಕಡೆ ಬಂಡಾಯ ಅಭ್ಯರ್ಥಿಗಳು ಬಿಜೆಪಿಗೆ ಸೇರ್ಪಡೆಗೊಂಡರೆ, ಕೆಲ ಕಡೆ ಬೆಂಬಲ ಸೂಚಿಸಿದ್ದಾರೆ.
ನವೆಂಬರ್ 20 ರಂದು ನಡೆಯಲಿರುವ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿಯ ಅಧಿಕೃತ ಅಭ್ಯರ್ಥಿಗಳ ವಿರುದ್ಧ 22 ವಿಧಾನಸಭಾ ಕ್ಷೇತ್ರಗಳ ಈ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಾಜಿ ಸಚಿವ ರಾಜೇಂದ್ರ ಮುಲಾಕ್ ಸೇರಿದಂತೆ ಪ್ರಮುಖ ನಾಯಕರು ಕ್ರಮ ಎದುರಿಸಿದ್ದಾರೆ.
ಎಐಸಿಸಿ ಉಸ್ತುವಾರಿ ರಮೇಶ್ ಚೆನ್ನಿತ್ತಲ ಅವರ ನಿರ್ದೇಶನದ ಮೇರೆಗೆ ಪಕ್ಷದಿಂದ ಅಮಾನತಿನ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಹೇಳಿಕೆ ತಿಳಿಸಿದೆ.
ಯಾರೆಲ್ಲಾ ಪಕ್ಷದಿಂದ ಕಿಕ್ ಔಟ್.?
ರಾಮ್‌ಟೆಕ್‌ನಿಂದ ಸ್ಪರ್ಧಿಸಿರುವ ಮಾಜಿ ಸಚಿವ ರಾಜೇಂದ್ರ ಮುಲಾಕ್, ಕಟೋಲ್‌ನಿಂದ ಯಜ್ಞವಾಲ್ಕ್ ಜಿಚ್ಕರ್, ಕಸ್ಬಾದಿಂದ ಕಮಲ್ ವ್ಯಾವಾರೆ, ಕೊಪ್ರಿ ಪಚ್ಪಖಾಡಿಯಿಂದ ಮನೋಜ್ ಶಿಂಧೆ ಮತ್ತು ಸುರೇಶ್ ಪಾಟೀಲ್, ಪಾರ್ವತಿಯಿಂದ ಆಬಾ ಬಾಗುಲ್ ಅಮಾನತುಗೊಂಡಿದ್ದಾರೆ.
ಆನAದರಾವ್ ಗೆಡಂ, ಶಿಲು ಚಿಮುರ್ಕರ್, ಸೋನಾಲ್ ಕೋವೆ, ಭರತ್ ಯೆರೆಮೆ, ಅಭಿಲಾಷ ಗವಟೂರೆ, ಪ್ರೇಮಸಾಗರ ಗನ್ವೀರ್, ಅಜಯ್ ಲಾಂಜೇವರ್, ವಿಲಾಸ್ ಪಾಟೀಲ್, ಆಸ್ಮಾ ಜಾವಾದ್ ಚಿಖ್ಲೇಕರ್, ಹಂಸಕುಮಾರ್ ಪಾಂಡೆ, ಮೋಹನರಾವ್ ದಾಂಡೇಕರ್, ಮಂಗಲ್ ವಿಲಾಸ್ ಭುಜ್ವಾಲ್, ಮನೋಜ್, ವಿಜಯ್ ಖಡ್ಸೆ, ಲಶ್ವಿನ್ ಖಾನ್, ಲಶ್ವಿನ್ ಖಾನ್ ಜಿಚ್ಕರ್, ರಾಜು ಜೋಡೆ ಮತ್ತು ರಾಜೇಂದ್ರ ಮುಕಾ ಇತರ ಅಮಾನತುಗೊಂಡ ನಾಯಕರು.