
ಮುಸ್ಲಿಂ ಯುವಕನೊಬ್ಬ ಅಪ್ರಾಪ್ತ ಹಿಂದೂ ಬಾಲಕಿಯನ್ನು ಅಪಹರಿಸಿ, ಬಲವಂತವಾಗಿ ಮತಾಂತರ ಮಾಡಿ ಘಟನೆ ವರದಿಯಾಗಿದೆ. ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಮೌಗಂಜ್ ಜಿಲ್ಲೆಯ ಮುಸ್ಲಿಂ ಯುವಕ ತನ್ನ ಮಗಳನ್ನು ಅಪಹರಿಸಿ, ಬಲವಂತವಾಗಿ ಮತಾಂತರ ಮಾಡಿದ್ದಾನೆ. ಈ ಘಟನೆ ಜನವರಿ 2 ರಂದು ನಡೆದಿದೆ. ಕಿಡ್ನಾಪ್ ಮಾಡಿದ ಮುಸ್ಲಿಂ ಯುವಕನನ್ನು ಇಮಾನ್ ಅಲಿ ಅನ್ಸಾರಿ ಎಂದು ಗುರುತಿಸಲಾಗಿದೆ. ಬಾಲಕಿಯ ತಂದೆ ಲವ್ ಜಿಹಾದ್ ಆರೋಪ ಮಾಡಿ ಪೊಲೀಸರಿಗೆ ದೂರು ಕೊಟ್ಟರೂ, ಪೊಲೀಸರು ಕರ್ತವ್ಯ ಲೋಪ ಎಸಗಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಈ ಪ್ರಕರಣ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ನಡೆದಿದೆ. ಬಾಲಕಿಯ ತಂದೆ ವಿಶ್ವನಾಥ್ ಗುಪ್ತಾ, ಲಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಿದ ಇಮಾನ್ ಅಲಿ ಅನ್ಸಾರಿ ಮತ್ತು ಆತನ ಕುಟುಂಬಸ್ಥರು ಸಂತ್ರಸ್ತೆಯ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದಾಗಿ ವರದಿಯಾಗಿದೆ.
ಪೊಲೀಸರು ಕೂಡಾ ಮುಸ್ಲಿಂ ಯುವಕನ ಕುಟುಂಬಸ್ಥರ ಜೊತೆ ಶಾಮೀಲಾಗಿದ್ದಾಗಿ ಬಾಲಕಿಯ ತಂದೆ ಆರೋಪಿಸಿದ್ದಾರೆ. ಇನ್ನು ಬಾಲಕಿ ಪತ್ತೆಯಾಗುತ್ತಿದ್ದಂತೆ ಪೊಲೀಸರು ಠಾಣೆಗೆ ಕರೆತಂದಿದ್ದಾರೆ. ಈ ವೇಳೆ ಬಾಲಕಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮುಸ್ಲಿಂ ಯುವಕ ನನ್ನನ್ನು ಅಪರಿಸಿಲ್ಲ. ನನ್ನ ತಂದೆಯ ಹಿಂಸೆಯಿAದ ಮನೆ ಬಿಟ್ಟು ಹೋಗಿದ್ದಾಗಿ ತಿಳಿಸಿದ್ದಾಳೆ. ಆದರೆ ತಂದೆ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಇನ್ನು ಘಟನೆ ಬೆಳಕಿಗೆ ಬರುತ್ತಿದ್ದಂತೆ ಹಿಂದೂ ಪರ ಸಂಘಟನೆಗಳು ಸೂಕ್ತ ತನಿಖೆಗೆ ಒತ್ತಾಯಿಸಿದೆ. ಅಪ್ರಾಪ್ತೆ ಹಾಗೂ ಮುಸ್ಲಿಂ ಯುವಕ ಒಟ್ಟಿಗೆ ತಿರುಗಾಟ ನಡೆಸಿದ್ದನ್ನು ಕಂಡಿದ್ದಾಗಿ ಹೇಳಿದ್ದಾರೆ. ಪೊಲೀಸ್ ಠಾಣೆಗೆ ಬರುವಾಗ, ಸಂತ್ರಸ್ತೆ ಕಪ್ಪು ಶಾಲು ಹಾಕಿದ್ದು, ಹಣೆಯ ಬೊಟ್ಟು ತೆಗೆದಿದ್ದು, ಮತಾಂತರದ ಅನುಮಾನ ಜಾಸ್ತಿ ಮಾಡಿದೆ.