Mangalore and Udupi news
ಅಪರಾಧಕಾಸರಗೋಡುದೇಶ- ವಿದೇಶ

ಮೊದಲ ಮದುವೆ ಬಚ್ಚಿಟ್ಟು ಮತ್ತೊಂದು ಮದುವೆ; ಮೊಬೈಲ್‌ನಲ್ಲೇ ತಲಾಖ್ ಕೊಟ್ಟ ಅಬ್ದುಲ್ ಬಾಸಿತ್

Advertisement

ಕೊಲ್ಲಂ: ಮುಸ್ಲಿಂ ಧರ್ಮಗುರು ಮೊಬೈಲ್‌ನಲ್ಲೇ ಹೆಂಡತಿಗೆ ತಲಾಖ್ ನೀಡಿದ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲ್ಲಂನ ಮೈನಾಗಪಲ್ಲಿ ಮೂಲದ ಇಮಾಮ್ ಅಬ್ದುಲ್ ಬಾಸಿತ್ ಬಂಧಿತ ಆರೋಪಿ. ಫೋನ್‌ನಲ್ಲಿ ತ್ರಿವಳಿ ತಲಾಖ್ ಹೇಳಿದ್ದಾಗಿ 20 ವರ್ಷದ ಯುವತಿಯ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾಳೆ.

ಆರೋಪಿ ಅಬ್ದುಲ್ ಬಾಸಿತ್ ಪತ್ತನಂತಿಟ್ಟದ ಊಟುಕುಲಂ ಮಸೀದಿಯ ಇಮಾಮ್. ಪತ್ನಿ ಚವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಷಯ ಏನೆಂಬುದನ್ನು ವಿವರಿಸದೆ ಆರೋಪಿಯು ಫೋನ್‌ನಲ್ಲಿ ತ್ರಿವಳಿ ತಲಾಖ್ ಹೇಳಿದ್ದಾನೆ ಎಂದು ಮಹಿಳೆ ದೂರು ಕೊಟ್ಟಿದ್ದಾಳೆ. ಅಬ್ದುಲ್ ಬಾಸಿತ್ ತನ್ನ ಮೊದಲ ಮದುವೆಯನ್ನು ಮರೆಮಾಚಿ ಮದುವೆಯಾಗಿದ್ದಾನೆ. ಈ ವಿಷಯ ತಿಳಿದು ಈ ಬಗ್ಗೆ ಪ್ರಶ್ನಿಸಿದಾಗ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದಾನೆ. ಇಷ್ಟಲ್ಲದೆ ಇನ್ನೊಂದು ಮದುವೆಯಾಗುವುದಾಗಿ ಬೆದರಿಕೆ ಹಾಕಿದ್ದ ಎಂದು ದೂರಿದ್ದಾಳೆ.

ಕಳೆದ ವಾರ ಜಗಳವಾಗಿ ಯುವತಿಯನ್ನು ಆಕೆಯನ್ನು ತವರು ಮನೆಗೆ ಬಿಟ್ಟು ಬಂದಿದ್ದ. ನಂತರ ದೂರವಾಣಿ ಕರೆ ಮಾಡಿ ತಲಾಖ್ ಹೇಳಿದ್ದಾನೆ. ತಲಾಖ್ ನೀಡುವ ಮೊದಲು ಆರೋಪಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಮೂರು ಬಾರಿ ತಲಾಖ್ ಹೇಳಿದ ನಂತರ ನಾವು ಇನ್ನು ಮುಂದೆ ಯಾವುದೇ ಸಂಬಂಧವನ್ನು ಹೊಂದುವುದಿಲ್ಲ ಎಂದು ತಿಳಿಸಿರುವುದಾಗಿ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

Related posts

Leave a Comment