ಕಿನ್ನಿಗೋಳಿ : ಕಳೆದ 29 ವರ್ಷಗಳಿಂದ ಪರಿಸರದ ಐದು ಮನೆಯವರು ಸೇರಿ ಶ್ರೀ ಮತಿ ಸಂಜೀವಿ ಇವರ ಮಾರ್ಗದಶನದಲ್ಲಿ ಹಾಗೂ ದೇವಿ ಪ್ರಸಾದ್ ಇವರ ಮುಂದಾಳತ್ವದಲ್ಲಿ ಸದಸ್ಯರಾದ ರಾಜೇಶ್, ಸುರೇಶ್, ಅರುಣ್, ಸನತ್, ರೋಹಿತ್, ಗಣೇಶ್, ಸಚಿನ್ ಇವರೊಂದಿಗೆ ಕಟೀಲು ದೇವಿಯ ಭಾವಚಿತ್ರವನ್ನು ಪ್ರತಿಷ್ಟಾಪಿಸಿ ಒಂಬತ್ತು ದಿನಗಳ ಪರಿಯಂತ ತಮ್ಮ ಸಂಪಾದನೆಯ ಸ್ವಲ್ಪ ಭಾಗವನ್ನು ಒಟ್ಟು ಕೂಡಿಸಿ ನವರಾತ್ರಿ ಉತ್ಸವವನ್ನು ನಡೆಸಿಕೊಂಡು ಬಂದಿರುತ್ತಾರೆ. ಮಕ್ಕಳಾಟಿಕೆಯಲ್ಲಿ ಆರಂಭವಾದ ಈ ಪೂಜೆಯು ಇಂದು ಅತೀ ವಿಜೃಂಭಣೆಯಿಂದ ನಡೆಯುತ್ತಿದೆ.
ಅನೇಕ ಭಕ್ತರು ಇಲ್ಲಿ ಬಂದು ತಮ್ಮ ಕಷ್ಟವನ್ನು ದೇವರಲ್ಲಿ ಹರಿಕೆ ಮಾಡಿ ಅದಕ್ಕೆ ಪರಿಹಾರ ಕಂಡುಕೊಂಡಿದ್ದಾರೆ.
30ನೇ ವರ್ಷದ ನವರಾತ್ರಿ ಉತ್ಸವವು ತಾ 03.10.2024 ರಿಂದ ತಾ 12.10.2024 ರ ವರೆಗೆ ನಡೆಯಿತು.
ತಾ 03.10.2024 ರಂದು ಬೆಳ್ಳಿಗ್ಗೆ ಗಣಹೋಮ ಮತ್ತು ದೇವಿಯ ಪ್ರತಿಷ್ಟಾಪನೆಯು ಅರ್ಚಕರಾದ ವೇದವ್ಯಾಸ ಉಡುಪ ಕೊಡೆತ್ತೂರು ಇವರ ಉಪಸ್ಥಿತಿಯಲ್ಲಿ ನಡೆಯಿತು.
ನವರಾತ್ರಿಯ ಹತ್ತು ದಿನಗಳ ಪರಿಯಂತ ತ್ರಿಕಾಲ ಪೂಜೆ ಹಾಗೂ ರಾತ್ರಿ ಭಜನೆ ಕಾರ್ಯಕ್ರಮ ನಡೆಯಿತು.
ತಾ 12.10.2024ರಂದು ಮದ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ 7ಗಂಟೆಗೆ ಆಯುಧ ಪೂಜೆ ನಡೆಯಿತು.ಊರ ಪರವೂರ ಭಕ್ತರು ಈ ಕಾರ್ಯಕ್ರಮದಲ್ಲಿ ಭಕ್ತಿ ಇಂದ ಭಾಗವಹಿಸಿ ದೇವಿಯ ಪ್ರಸಾದ ಸ್ವೀಕರಿಸಿದರು.