Mangalore and Udupi news
Blogಪ್ರಸ್ತುತಮಂಗಳೂರುಮನೋರಂಜನೆ

ಗೆಳೆಯರ ಬಳಗ ಸುರತ್ಕಲ್ ಶ್ರೀ ಶಾರದಾ ಹುಲಿ ಇದರ ಅದ್ದೂರಿ “ಊದು ಪೂಜೆ”

ಮಂಗಳೂರು : ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ದಸರಾ ಮಹೋತ್ಸವದ ಶಾರದಾ ಮಾತೆಯ ಶೋಭಾಯಾತ್ರೆಯ ಸಲುವಾಗಿ ದಿ| ಮಂಜುನಾಥ್ ಮಂಗಳೂರು ಇವರ ಸವಿನೆನಪಿಗಾಗಿ ಗೆಳೆಯರ ಬಳಗ ಸುರತ್ಕಲ್ ಮಂಗಳೂರು ಇದರ 15ನೇ ವರ್ಷದ ಶಾರದಾ ಹುಲಿ ಕಾರ್ಯಕ್ರಮ ನಡೆಯಲಿದ್ದು ಅಕ್ಟೋಬರ್ 12 ಅದ್ದೂರಿಯಾಗಿ ಊದು ಪೂಜೆ ಕಾರ್ಯಕ್ರಮ ನಡೆದಿದೆ.

ಊದು ಪೂಜೆ ಕಾರ್ಯಕ್ರಮಕ್ಕೆ ಮೆರಗು ನೀಡಿದ ಸೆಲೆಬ್ರಿಟಿಗಳ ಆಗಮನ

ಕನ್ನಡ ಚಿತ್ರರಂಗದ ಖ್ಯಾತ ನಟ ರಾಜ್ ಬಿ ಶೆಟ್ಟಿ ಸೇರಿದಂತೆ ತುಳು ಚಿತ್ರರಂಗದ ಖ್ಯಾತ ನಟ ಆಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್, ಜೊತೆಗೆ ನಟ ವಿನೀತ್ ಕುಮಾರ್, ನಟ ರಾಹುಲ್ ಅಮೀನ್, ನಟಿ ಸಮತಾ ಅಮೀನ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ಎರಡು ಅಶಕ್ತ ಕುಟುಂಬಗಳಿಗೆ ಧನಸಹಾಯ ಮಾಡಲಾಯಿತು. ದಿ. ಅಶೋಕ್ ರಾಜ್ ಕಾಡಬೆಟ್ಟು ಅವರ ಪತ್ನಿ, ಮಕ್ಕಳಿಗೆ ಹಾಗೂ ಹಿರಿಯ ಹುಲಿವೇಷ ಕಲಾವಿದ ಕಮಲಾಕ್ಷ ಬಜಿಲಕೇರಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ಕಾರ್ಯದಲ್ಲಿ ಗೆಳೆಯರ ಬಳಗ ಸುರತ್ಕಲ್ ಹದಿನೈದು ವರ್ಷ ಪೂರೈಸಿದ ಹಿನ್ನಲೆ ಹೊಸ ಲೋಗೋ ಅನಾವರಣಗೊಂಡಿತು.

14-10-2024 ಸೋಮವಾರ – ಬೆಳಿಗ್ಗೆ 10.00ರಿಂದ : ಹುಲಿವೇಷ ಪ್ರದರ್ಶನ. ಈ ಎಲ್ಲಾ ಕಾರ್ಯಕ್ರಮಗಳು ಶಿವಾಜಿನಗರ ಮೈದಾನ, ಕೋಡಿಕೆರೆ, ಕುಳಾಯಿ ಇಲ್ಲಿ ಆದ್ದೂರಿಯಿಂದ ನಡೆಯಲಿದೆ.

ಸಂಜೆ 8.00ರಿಂದ ಹುಲಿವೇಷದ ಆಕರ್ಷಕ ಟ್ಯಾಬ್ಲೊದೊಂದಿಗೆ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಮಂಗಳೂರು ಶಾರದಾ ಮಾತೆಯ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದೆ.

 

Related posts

Leave a Comment