
ಕೇರಳ ಪೊಲೀಸರ ವಿಶೇಷ ಕಾರ್ಯಾಚರಣೆ ಗ್ರೂಪ್‌ಗೆ ಸೇರಿದ ಕಮಾಂಡೋ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನಕ್ಸಲ್ ಚಟುವಟಿಕೆಯನ್ನು ಭೇದಿಸುವ ಕ್ಯೂಬಿಂಗ್ ಕಾರ್ಯಚರಣೆಯಲ್ಲಿ ಸಕ್ರಿಯರಾಗಿದ್ದರು. ಮಲಪ್ಪುರಂ ಜಿಲ್ಲೆಯ ಅರೀಕೋಡ್‌ನಲ್ಲಿರುವ ಪೊಲೀಸ್ ಕ್ಯಾಂಪ್‌ನಲ್ಲಿ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿ. 15 ಭಾನುವಾರ ರಾತ್ರಿ ವಿನೀತ್ (35) ತನ್ನ ಗರ್ಭಿಣಿ ಪತ್ನಿಯ ಜೊತೆಗಿರಲು ತನ್ನನ ಉನ್ನತ ಅಧಿಕಾರಿಗಳ ಬಳಿ ರಜೆಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ ರಜೆ ನೀಡಲು ನಿರಾಕರಿಸಿದ ಹಿನ್ನಲೆ ಕೆಲಸದ ಒತ್ತಡವನ್ನು ತಾಳಲಾರದೆ ತನ್ನ ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಪರೀತ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡ ಕೇರಳ ಪೊಲೀಸ್ ಸಿಬ್ಬಂದಿಗಳ ಪಟ್ಟಿಗೆ ಅವರ ಸಾವು ಸೇರ್ಪಡೆಯಾಗಿದೆ. ಅಂದಾಜಿನ ಪ್ರಕಾರ ಸುಮಾರು 90 ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿನೀತ್ ನಕ್ಸಲರನ್ನು ಹಿಂಬಾಲಿಸುವ ಕಾರ್ಯಾಚರಣೆಯನ್ನು ನಿರ್ವಹಿಸುವ ವಿಶೇಷ ಕಾರ್ಯಾಚರಣೆ ಗುಂಪಿನ ಕಮಾಂಡೋ ಆಗಿದ್ದರು. ವಯನಾಡ್ ಮೂಲದವರಾದ ಅವರು ಕಳೆದ 45 ದಿನಗಳಿಂದ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದು, ರಜೆಗಾಗಿ ಮನವಿ ಮಾಡಿದರೂ ಉನ್ನತ ಅಧಿಕಾರಿಗಳು ನಿರಾಕರಿಸಿದ್ದಾರೆ.
ಮೂಲಗಳ ಪ್ರಕಾರ, ವಿನೀತ್ ಒತ್ತಡವನ್ನು ಸಹಿಸಲಾಗದೆ ದುಡಿಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ತನ್ನ ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣಪಕ್ಷಿ ಹಾರಿಹೋಗಿತ್ತು.