Mangalore and Udupi news
ದೇಶ- ವಿದೇಶಪ್ರಸ್ತುತ

ಹಸುವನ್ನು ಬಿಡಿಸಲು ಹೋದಾಗ ಕಾಡಾನೆ ದಾಳಿ – ಯುವಕ ಮೃತ್ಯು

Advertisement

ಕೇರಳ: ಮೇಯಿಸಲು ಕಟ್ಟಿ ಹಾಕಿದ ದನವನ್ನು ಮನೆಗೆ ಕರೆದುಕೊಂಡು ಬರಲೆಂದು ಹೋದಾಗ ಕಾಡಾನೆ ದಾಳಿಗೆ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಕೇರಳ ಮುಳ್ಳರಿಂಗಾಡು ಎಂಬಲ್ಲಿ ಡಿ. 29ರ ಮಧ್ಯಾಹ್ನ 3:30ರ ಸುಮಾರಿಗೆ ಈ ಘಟನೆ ನಡೆದಿದೆ.

ಅಮರ್ ಇಲಾಹಿ (23) ಮೃತಪಟ್ಟ ಯುವಕ. ಭಾನುವಾರ ಮಧ್ಯಾಹ್ನ ಅಮರ್ ಇಲಾಹಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ತನ್ನ ಮನೆಯ ಸಮೀಪ ಹಸುವನ್ನು ಬಿಚ್ಚಲು ಮುಂದಾಗಿದ್ದಾನೆ. ಈ ವೇಳೆ ಅಮರ್ ಮತ್ತು ನೆರೆಮನೆಯ ಬಿಎಂ ಮನ್ಸೂರ್ ಎಂಬವರ ಮೇಲೆ ಎರಡು ಆನೆಗಳು ಮುನ್ನುಗ್ಗಿ ಬಂದಿದೆ. ಬಿಎಂ ಮನ್ಸೂರ್ ಆನೆ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ.

ಅಮರ್ ಅಥವಾ ಮನ್ಸೂರ್ ಇಬ್ಬರಿಗೂ ಓಡಲು ಸಮಯವಿರಲಿಲ್ಲ. ಆದರೆ ದುರದೃಷ್ಟವಶಾತ್ ಅಮರ್‌ಗೆ ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ತೀವ್ರ ಗಾಯಗೊಂಡಿದ್ದ ಅಮರ್ ಅವರನ್ನು ತೊಡುಪುಳ ಕರಿಕ್ಕೋಡ್ ತಾಲೂಕು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಕಳೆದ ತಿಂಗಳು ಮುಳ್ಳರಿಂಗಾಡು ಪ್ರದೇಶಲ್ಲಿ ಕಾಡಾನೆ ದಾಳಿ ಮತ್ತೊಂದು ಜೀವ ಹಾರಿಹೋಗಿತ್ತು.

ಕಾಡಾನೆ ದಾಳಿಯಿಂದ ಮೃತಪಟ್ಟ ಯುವಕನ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದಾಗಿ ಅರಣ್ಯ ಸಚಿವ ಎ.ಕೆ.ಸಶೀಂದ್ರನ್ ಘೋಷಿಸಿದ್ದಾರೆ. ದಾಳಿ ನಡೆದ ಪ್ರದೇಶವು ಅರಣ್ಯ ಪ್ರದೇಶಕ್ಕೆ ಸಮೀಪದಲ್ಲಿದೆ, ಇತ್ತೀಚಿನ ವಾರಗಳಲ್ಲಿ ಕಾಡು ಆನೆಗಳು ಆಗಾಗ್ಗೆ ಕಾಣಿಸಿಕೊಂಡಿವೆ. ಸುಮಾರು ಎರಡೂವರೆ ವರ್ಷಗಳಿಂದ ಆನೆಗಳ ಹಾವಳಿ ಮುಂದುವರಿದಿದ್ದು, ಆನೆಗಳು ಹೆಚ್ಚಾಗಿ ಜನವಸತಿ ಪ್ರದೇಶಗಳಿಗೆ ಬರುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

 

Related posts

Leave a Comment