ಇಸ್ರೇಲ್ ಮೇಲೆ ಇರಾನ್ ಇದೇ ಮೊದಲ ಬಾರಿಗೆ ಹೈಪರ್ಸಾನಿಕ್ ಕ್ಷಿಪಣಿ ಪ್ರಯೋಗಿಸಿ ದಾಳಿ ನಡೆಸಿದೆ. ಇರಾನ್ 400ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸುವ ಮೂಲಕ ಇಸ್ರೇಲ್ ವಿರುದ್ದ ಪ್ರತೀಕಾರದ ಎಚ್ಚರಿಕೆ ನೀಡಿದೆ. ಇದು ಸದ್ಯ ಮೂರನೇ ವಿಶ್ವಯುದ್ದದ ಭೀತಿಯನ್ನು ಮೂಡಿಸಿದೆ.
ಇಸ್ರೇಲ್ ಮೇಲೆ ನಾವು ಹೈಪರ್ಸಾನಿಕ್ ಕ್ಷಿಪಣಿ ಪ್ರಯೋಗಿಸಿದ್ದೇವೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGC) ತಿಳಿಸಿದೆ. ಇಸ್ರೇಲಿನ ಐರನ್ಡೋಮ್ ತಪ್ಪಿಸಲು ಫತಾಹ್ ಹೈಪರ್ಸಾನಿಕ್ ಕ್ಷಿಪಣಿಯನ್ನು ಇರಾನ್ ಬಳಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಶಬ್ದಕ್ಕಿಂತ ವೇಗವಾಗಿ ಚಲಿಸುವ ಸಾಮರ್ಥ್ಯ ಹೈಪರ್ಸಾನಿಕ್ ಕ್ಷಿಪಣಿಗಳಿಗಿದ್ದು ಇರಾನ್ ಕಳೆದ ವರ್ಷದ ಜೂನ್ನಲ್ಲಿ ಫತಾಹ್-1, ನವೆಂಬರ್ನಲ್ಲಿ ಫತಾಹ್- 2 ಕ್ಷಿಪಣಿ ಪರೀಕ್ಷೆ ನಡೆಸಿತ್ತು. ಬಳಸಲಾದ 80-90% ಕ್ಷಿಪಣಿಗಳು ನಿಗದಿತ ಗುರಿಯನ್ನು ಹೊಡೆದು ಹಾಕಿವೆ ಎಂದು IRGC ಹೇಳಿಕೊಂಡಿದೆ.
ಕ್ಷಿಪಣಿ ದಾಳಿ ಬೆನ್ನಲ್ಲೇ ಭದ್ರತಾ ಇಲಾಖೆಯ ಪ್ರಮುಖರ ಜೊತೆ ಸಭೆ ನಡೆಸಿದ ನೆತನ್ಯಾಹು, ಇರಾನ್ ದಾಳಿಯನ್ನು ಬಲವಾಗಿ ಖಂಡಿಸಿದ್ದಾರೆ. ವಿಶ್ವದಲ್ಲೇ ಅತ್ಯಂತ ಸುಧಾರಿತ ವಾಯು ರಕ್ಷಣಾ ವ್ಯವಸ್ಥೆಯನ್ನು ಇಸ್ರೇಲ್ ಹೊಂದಿದ್ದು, ಇರಾನ್ ಕ್ಷಿಪಣಿ ದಾಳಿಯನ್ನು ನಮ್ಮ ವಾಯುಪಡೆ ವಿಫಲಗೊಳಿಸಿದೆ. ಅದಕ್ಕಾಗಿ ಧನ್ಯವಾದಗಳು’ ಎಂದಿದ್ದಾರೆ.
ಇರಾನ್ ದಾಳಿಗೆ ತೀವ್ರ ಪ್ರತಿರೋಧ ಒಡ್ಡಿರುವ ಇಸ್ರೇಲ್, ಪ್ರತಿ ದಾಳಿ ಆರಂಭಿಸಿದೆ. ಇದರಿಂದ ಇಸ್ರೇಲ್ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಲಕ್ಷಾಂತರ ಜನ ಬಾಂಬ್ ಶೆಲ್ಟರ್ಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ‘ಹುತಾತ್ಮ ನಾಯಕ ಸಯ್ಯದ್ ಹಸನ್ ನಸ್ರಲ್ಲಾ ಅವರ ಹತ್ಯೆಗೆ ಪ್ರತೀಕಾರವಾಗಿ ಆಕ್ರಮಣಕಾರರ ಹೃದಯವನ್ನು ಗುರಿಯಾಸಿಕೊಂಡಿದ್ದೇವೆ’ ಎಂದು ಇರಾನ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
Iran’s missile attack against Israel : Iran has launched an unprecedented attack against Israel, firing a barrage of missiles at the country in the latest escalation amid weeks of soaring violence and tensions in the region.