Mangalore and Udupi news
ದೇಶ- ವಿದೇಶಪ್ರಸ್ತುತ

56 ವರ್ಷಗಳ ಕಾಲ ಹಿಮದಲ್ಲೇ‌ ಹುದುಗಿಹೋಗಿತ್ತು ನೂರಾರು ಸೈನಿಕರ ಮೃತದೇಹ..!

1968ರಲ್ಲಿ ಹಿಮಾಚಲ ಪ್ರದೇಶದ ರೋಹಟಗ್​ ಪಾಸ್ ಬಳಿ ಭೀಕರ ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದ ನಾಲ್ವರ ಮೃತದೇಹ ಪತ್ತೆಯಾಗಿದೆ. ಫೆಬ್ರವರಿ 7, 1968ರಂದು ಚಂಡಿಗಢದಿಂದ 102 ಸೈನಿಕರನ್ನು ಹೊತ್ತುಕೊಂಡ ಸೇನಾ ವಿಮಾನ ಟೇಕಾಫ್​ ಆಗಿತ್ತು. ಆದ್ರೆ ಪ್ರತಿಕೂಲ ಹವಾಮಾನದ ಕಾರಣದಿಂದ ಹಿಮಾಚಲ ಪ್ರದೇಶದ ರೋಹಟಗ್​ ಪಾಸ್​ ಬಳಿ ಪತನಗೊಂಡಿತ್ತು.

rohtang plane crash

 

ರೋಹಟಗ್ ಪಾಸ್​ ಹಿಮದಲ್ಲಿ ವಿಮಾನ ಸೇರಿ ಶವಗಳೆಲ್ಲವೂ ಹಿಮದಿಂದಾಗಿ ಮುಚ್ಚಿ ಹೋಗಿದ್ದವು. ಈ ಘಟನೆ ನಡೆದು ಈಗ 56 ವರ್ಷಗಳೇ ಕಳೆದಿವೆ. ಸದ್ಯ ಶೋಧ ಕಾರ್ಯದಲ್ಲಿ ನಾಲ್ವರ ಶವಗಳು ಪತ್ತೆಯಾಗಿವೆ. ನಾಲ್ಕು ಮೃತದೇಹ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ.

rohtang plane crash

1968 ರಂದು ಮಿಲಿಟರಿ ಟ್ರಾನ್ಸ್​​ಫೋರ್ಟ್​ ವಿಮಾನದಲ್ಲಿ ಹೋಗುತ್ತಿದ್ದ 102 ಸೈನಿಕರು ಮಾರ್ಗದ ಮಧ್ಯೆದಲ್ಲಿಯೇ ವಿಮಾನ ಪತನಗೊಂಡಿದ್ದರಿಂದ ಎಲ್ಲರೂ ನಾಪತ್ತೆಯಾಗಿದ್ದರು. ವಿಮಾನ ಸೇರಿ ಸೈನಿಕರು ಕೂಡ ಹಿಮದಲ್ಲಿ ಮುಚ್ಚಿ ಹೋಗಿದ್ದರು. 2003ರಲ್ಲಿ ಮೊದಲ ಬಾರಿಗೆ ವಿಮಾನದ ಅವಶೇಷಗಳು ಪತ್ತೆಯಾಗಿದ್ದವು. ಅಟಲ್​ ಬಿಹಾರಿ ವಾಜಪೇಯಿ ಮೌಂಟನೇರಿಂಗ್ ಇನ್ಸ್​ಟಿಟ್ಯೂಟ್​​ ಅವಶೇಷಗಳನ್ನು ಪತ್ತೆ ಮಾಡಿತ್ತು. ಬಳಿಕ ಸೈನಿಕರ ಶವಗಳಿಗಾಗಿ ನಿರಂತರ ಹುಡುಕಾಟ ನಡೆದಿತ್ತು. 2003 ರಿಂದ 2019ರವರೆಗೆ ಒಟ್ಟು ಐದು ಮಂದಿ ಸೈನಿಕರ ಶವಗಳು ಪತ್ತೆಯಾಗಿದ್ದವು.

rohtang plane crash

ಅದಾದ ಬಳಿಕ ಈಗ ಮತ್ತೆ ನಾಲ್ವರ ಶವಗಳು ಪತ್ತೆಯಾಗಿವೆ. ಒಟ್ಟಾರೆ ಅಂದು ಭೀಕರ ದುರಂತದಲ್ಲಿ ಜೀವ ಕಳೆದುಕೊಂಡವರಲ್ಲಿ 9 ಶವಗಳು ಇಲ್ಲಿಯವರೆಗೆ ಪತ್ತೆಯಾದಂತಾಗಿದೆ. ಸೇನೆಯ ಸಿಪಾಯಿ ನಾರಾಯಣ್ ಸಿಂಗ್, ಮಾಲ್ಕನ್ ಸಿಂಗ್​ ಥಾಮಸ್ ಚರಣ್ ಹಾಗೂ ಇನ್ನೋರ್ವ ಸೈನಿಕನ ಶವ ಪತ್ತೆಯಾಗಿದೆ. ಇನ್ನು ಒಂದು ಶೋಧ ಕಾರ್ಯ ಅಕ್ಟೋಬರ್ 10ರವರೆಗೂ ಮುಂದುವರಿಯಲಿದೆ ಎಂದು ಹೇಳಲಾಗಿದೆ.

Malayali soldier's mortal remains recovered 56 years after IAF plane crash over Rohtang Pass | Onmanorama News | Kerala News

Indian Army team recovered bodies of those killed in 1968 Rohtang plane crash

Mountaineering teams led by Indian Army’s Dogra Scouts Monday recovered four bodies from the Dhaka glacier area at a height of almost 16,000 feet, who had gone missing following the crash of an India Air Force (IAF) plane in the mountains near Rohtang on February 7, 1968.

Decades after aircraft crashed in Rohtang, 22-year-old's body is found, a family in Kerala finally gets closure | India News - The Indian Express

Related posts

Leave a Comment