Mangalore and Udupi news
ಗ್ರೌಂಡ್ ರಿಪೋರ್ಟ್ದೇಶ- ವಿದೇಶಪ್ರಸ್ತುತ

ಭಾರತದ ಡ್ರೈವಿಂಗ್ ಲೈಸೆನ್ಸ್ ಇದ್ದರೆ ಸಾಕು ಇಲ್ಲಿ ವಾಹನಗಳನ್ನು ಓಡಿಸಬಹುದು.!!

ಯಾವುದೇ ದೇಶಕ್ಕೆ ಹೋಗಿ ನೆಲೆಸಲೆಂದೊ ಅಥವಾ ವಿದ್ಯಾಭ್ಯಾಸಕ್ಕೆಂದು ಹೋದಾಗ ಅಲ್ಲಿ ವಾಹನ ಓಡಿಸಬೇಕಾದಲ್ಲಿ ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕಾಗುತ್ತದೆ. ಅದಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿ ಪಡೆಯಬೇಕಾಗುತ್ತದೆ. ಆದ್ರೆ ವಿಶ್ವದ ಈ 7 ರಾಷ್ಟ್ರಗಳಲ್ಲಿ ನೀವು ಭಾರತದ ಡ್ರೈವಿಂಗ್ ಲೈಸನ್ಸ್​ ಹೊಂದಿದ್ದರೂ ಕೂಡ ಅಲ್ಲಿ ಆರಾಮಾಗಿ ವಾಹನ ಚಲಾಯಿಸಬಹುದು ಆದ್ರೆ ಕೆಲವೊಂದಿಷ್ಟು ಷರತ್ತುಗಳಿರುತ್ತವೆ ಹಾಗೂ ನೀತಿ ನಿಯಮಗಳು ಇವೆ.

10 Driving Tips for New Drivers

ಯುಎಸ್​ಎ
ಯುನೈಟೆಡ್​ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ನೀವು ಭಾರತದ ಡ್ರೈವಿಂಗ್ ಲೈಸೆನ್ಸ್​​ ಹೊಂದಿದ್ದರೆ, ಅಮೆರಿಕಾದ ಐಷಾರಾಮಿ ರಸ್ತೆಗಳಲ್ಲಿ ನೀವು ಯಾವುದೇ ಭಯವಿಲ್ಲದೇ ವಾಹನಗಳನ್ನು ಓಡಿಸಬಹುದು. ಇದಕ್ಕೆ ಅಮೆರಿಕಾದಲ್ಲಿ ಪರವಾನಿಗೆ ಇದೆ. ಆದ್ರೆ ನೀವು ಅಮೆರಿಕಾಗೆ ಪ್ರವೇಶ ಪಡೆದ ದಿನದಿಂದ ಒಂದು ವರ್ಷದವರೆಗೆ ಮಾತ್ರ ಭಾರತದ ಡ್ರೈವಿಂಗ್​ ಲೈಸೆನ್ಸ್​ನೊಂದಿಗೆ ವಾಹನ ಚಲಾಯಿಸಬಹುದು. ಅದಾದ ಮೇಲೆಯೂ ಅಲ್ಲಿ ವಾಹನ ಓಡಿಸಬೇಕು ಅಂದ್ರೆ ನೀವು ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್​ನ್ನು ಹೊಂದಿರಲೇಬೇಕು.

ಆಸ್ಟ್ರೇಲಿಯಾ
ಆಸ್ಟ್ರೇಲಿಯಾದಲ್ಲಿಯೂ ಕೂಡ ನೀವು ಕೆಲವು ನಿರ್ಧಿಷ್ಟ ರಾಜ್ಯಗಳಲ್ಲಿ ಮಾತ್ರ ಭಾರತದ ಡ್ರೈವಿಂಗ್ ಲೈಸೆನ್ಸ್​ನಿಂದಲೇ ವಾಹನ ಚಲಾಯಿಸಬಹುದು. ಇಲ್ಲಿಯೂ ಕೂಡ ಅಷ್ಟೇ ಆಸ್ಟ್ರೇಲಿಯಾಗೆ ಪ್ರವೇಶ ಪಡೆದ ಒಂದು ವರ್ಷದವರೆಗೆ ಮಾತ್ರ ಪರವಾನಿಗೆ ಇದೆ. ನ್ಯೂ ಸೌತ್ ವೇಲ್ಸ್, ಕ್ವೀನ್ಸ್​ಲ್ಯಾಂಡ್, ದಕ್ಷಿಣ ಆಸ್ಟ್ರೇಲಿಯಾ ಮತ್ತು ಆಸ್ಟ್ರೇಲಿಯಾದ ರಾಜಧಾನಿ ಸಿಡ್ನಿಯಲ್ಲಿ ನೀವು ಭಾರತದ ವಾಹನ ಚಾಲನಾ ಪರವಾನಿಗೆ ಪತ್ರದ ಮೂಲಕ ಒಂದು ವರ್ಷದವರೆಗೆ ವಾಹವನ್ನು ಓಡಿಸಬಹುದು.

What Is Defensive Driving? | Progressive

ಕೆನಡಾ
ಕೆನಾಡದಲ್ಲಿಯೂ ಭಾರತದ ಡ್ರೈವಿಂಗ್ ಲೈಸೆನ್ಸ್ ಮೂಲಕವೇ ನೀವು ಅಲ್ಲಿನ ರಸ್ತೆಗಳಲ್ಲಿ ವಾಹನಗಳನ್ನು ಓಡಿಸಬಹುದು. ಆದ್ರೆ ಅದು 60 ದಿನಗಳು ಮಾತ್ರ. ಅಲ್ಲಿ 60 ದಿನಗಳವರೆಗೆ ಮಾತ್ರ ಭಾರತೀಯರಿಗೆ ತಮ್ಮದೇ ದೇಶದ ಡ್ರೈವಿಂಗ್ ಲೈಸೆನ್ಸ್​ ಮೂಲಕ ವಾಹವನ್ನು ಚಲಾಯಿಸಬಹುದು.

ಯುನೈಟೆಡ್​ ಕಿಂಗ್​ಡಮ್
ಯುನೈಟೆಡ್​ ಕಿಂಗ್​ಡಮ್ ಕೂಡ ಭಾರತೀಯರಿಗೆ ಯಎಸ್ಎ ಮಾದರಿಯಲ್ಲಿಯೇ ವಾಹನ ಚಲಾಯಿಸಲು ಭಾರತೀಯ ಡ್ರೈವಿಂಗ್ ಲೈಸನ್ಸ್​​ಗೆ ಪರವಾನಿಗೆ ನೀಡುತ್ತದೆ. ಅದು ಕೂಡ ಒಂದು ವರ್ಷದವರೆಗೆ ಮಾತ್ರ. ಇಂಗ್ಲೆಂಡ್, ವೇಲ್ಸ್, ಸ್ಕಾಟ್​ಲ್ಯಾಂಡ್ ಹಾಗೂ ನಾರ್ತ್​ ಐರ್ಲೆಂಡ್​ನಲ್ಲಿ ಭಾರತೀಯ ಡ್ರೈವಿಂಗ್ ಲೈಸನ್ಸ್​​ ಇದ್ದರೆ ಸುಮಾರು ಒಂದು ವರ್ಷಗಳ ಕಾಲ ನಾವು ನಿರಾತಂಕವಾಗಿ ವಾಹನ ಚಲಾಯಿಸಬಹುದು.

Best Four-Cylinder Cars in 2024 | U.S. News

ನ್ಯೂಜಿಲೆಂಡ್​
ನ್ಯೂಜಿಲೆಂಡ್​ನಲ್ಲೂ ಕೂಡ ಈ ಒಂದು ವ್ಯವಸ್ಥೆ ಇದೆ. ಅದು ಕೂಡ ಒಂದು ವರ್ಷ, ನಾವು ನ್ಯೂಜಿಲೆಂಡ್​ಗೆ ಪ್ರವೇಶ ಪಡೆದ ದಿನದಿಂದ ಒಂದು ವರ್ಷದವರೆಗೆ ನ್ಯೂಜಿಲೆಂಡ್​​ನ ಯಾವುದೇ ಸಿಟಿಯಲ್ಲಿಯೂ ಕೂಡ ಭಾರತದ ಡ್ರೈವಿಂಗ್ ಲೈಸೆನ್ಸ್​ನಿಂದ ವಾಹನ ಚಲಾಯಿಸಬಹುದು.

ಸ್ವಿಟ್ಜರ್​ಲೆಂಡ್​
ಸ್ವಿಟ್ಜರ್​ಲೆಂಡ್​ ಇದು ಪ್ರವಾಸಿಗರ ನೆಚ್ಚಿನ ತಾಣ.ಅನೇಕ ಭಾರತೀಯರು ಮಧುಚಂದ್ರಕ್ಕೆ ಅಲ್ಲಿಗೆ ಹೋಗಲು ಬಯಸುತ್ತಾರೆ. ಇಲ್ಲಿಗೆ ನೀವು ಭೇಟಿ ಕೊಟ್ಟಾಗ ಅಥವಾ ಆ ದೇಶಕ್ಕೆ ಹೋದಾಗ ಸುಮಾರು ಒಂದು ವರ್ಷಗಳ ಕಾಲ ನೀವು ಭಾರತದ ಡ್ರೈವಿಂಗ್ ಲೈಸೆನ್ಸ್ ಬಳಸಿ ಅಲ್ಲಿ ಕಾರ್, ಬೈಕ್​ಗಳನ್ನು ಬಾಡಿಗೆಗೆ ಪಡೆದು ಓಡಿಸಬಹುದು.

ಜರ್ಮನ್
ಜರ್ಮನ್​ನಲ್ಲಿಯೂ ಕೂಡ ಈ ಒಂದು ವ್ಯವಸ್ಥೆ ಇದೆ. ಭಾರತೀಯರಿಗೆ ಇಲ್ಲಿಯ ಡ್ರೈವಿಂಗ್ ಲೈಸೆನ್ಸ್​​ ಇದ್ದರೆ ಅಲ್ಲಿ ಒಂದು ವರ್ಷಗಳ ಕಾಲ ಅದೇ ಡ್ರೈವಿಂಗ್ ಲೈಸನ್ಸ್​ನಿಂದ ವಾಹನ ಓಡಿಸಲು ಅವಕಾಶ ನೀಡಲಾಗಿದೆ.

Related posts

Leave a Comment