ಬೆಳ್ತಂಗಡಿ : ಉಜಿರೆಯ ಯುವಕ ಬೆಂಗಳೂರಿನಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಉಜಿರೆ ಓಡಲ ನಿವಾಸಿ ದಿ. ಸಂಜೀವ ನಾಯ್ಕರ ಪುತ್ರ ವಿನೋದ್( 36) ಮೃತಪಟ್ಟ ಯುವಕ.
ವಿನೋದ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ನ.4 ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ತಾಯಿ ಗೀತಾ, ಸಹೋದರಿಯರಾದ ಹೇಮಾವತಿ, ಪದ್ಮಶ್ರೀ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.