Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡದೇಶ- ವಿದೇಶಪ್ರಸ್ತುತಮಂಗಳೂರುರಾಜ್ಯ

Jio ಹೆಸರಲ್ಲಿ ಭಾರೀ ಮೋಸ: ಈ ಮೆಸೇಜ್ ಬಂದರೆ ಹುಷಾರ್..!!

Advertisement

ಸೈಬರ್ ಅಪರಾಧ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ವಂಚಕರು ಹೊಸ, ಹೊಸ ಮಾರ್ಗಗಳ ಮೂಲಕ ಜನರ ವಂಚಿಸಲು ಪ್ರಯತ್ನಿಸ್ತಿದ್ದಾರೆ. ಡಿಜಿಟಲ್ ಅರೆಸ್ಟ್ ಸದ್ಯ ಟ್ರೆಂಡಿಂಗ್​​ನಲ್ಲಿದೆ. ಇದೀಗ ದೇಶದ ಹೆಸರಾಂತ ಟೆಲಿಕಾಂ ಕಂಪನಿ ಜಿಯೋ ಹೆಸರು ಬಳಸಿಕೊಂಡು ಜನರ ವಂಚಿಸುವ ಪ್ರಯತ್ನ ನಡೆದಿದೆ. ಯಾವುದಕ್ಕು ನೀವು ಹುಷಾರಾಗಿರಿ.

Navigating the Digital Maze: A Comprehensive Guide to Cyber Fraud Prevention

ಈ ಬಗ್ಗೆ ಸೈಬರ್ ಭದ್ರತೆಗೆ ಸಂಬಂಧಿಸಿದ ಸರ್ಕಾರಿ ಸಂಸ್ಥೆ ‘ಸೈಬರ್ ದೋಸ್ತ್’ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಎಚ್ಚರಿಕೆ ನೀಡಿದೆ. APK ಫೈಲ್ ಡೌನ್‌ಲೋಡ್ ಮಾಡಲು ಲಿಂಕ್ ಹೊಂದಿರುವ ಜಿಯೋ ಹೆಸರಿನಲ್ಲಿ ಫೇಕ್ ಮೆಸೇಜ್ ಕಳುಹಿಸಲಾಗುತ್ತಿದೆ. ನಿಮ್ಮಿಂದ ಈ ಫೈಲ್ ಡೌನ್‌ಲೋಡ್ ಮಾಡಿಸಿ ಫೋನ್ ಹ್ಯಾಕ್ ಮಾಡುವ ಹುನ್ನಾರ ನಡೆದಿದೆ. ಆ ಮೂಲಕ ನಿಮ್ಮ ಫೋನ್​ನಿಂದ ಗೌಪ್ಯ ಮಾಹಿತಿ ಕದಿಯುತ್ತಾರೆ ಎಂದು ಸೂಚನೆ ನೀಡಿದೆ.

ಎಚ್ಚರಿಕೆ! ನೀವು ‘Jio internet speed #5G network connection.apk’ ಹೆಸರಿನ ಫೈಲ್ ಡೌನ್‌ಲೋಡ್ ಮಾಡಬೇಡಿ. ಈ ಅಪಾಯಕಾರಿ ಫೈಲ್​ನಿಂದ ನಿಮ್ಮ ಫೋನ್ ಹ್ಯಾಕ್ ಆಗಲಿದೆ. ಅಧಿಕೃತ ಆಪ್ ಸ್ಟೋರ್‌ಗಳಿಂದ ಮಾತ್ರ ಅಪ್ಲಿಕೇಶನ್​​ಗಳನ್ನು ಡೌನ್​ಲೋಡ್ ಮಾಡಿಕೊಳ್ಳಿ ಎಂದು ಸೈಬರ್ ದೋಸ್ತ್​ ಎಚ್ಚರಿಕೆ ನೀಡಿದೆ.

ಜಿಯೋ ಹೆಸರು ದುರ್ಬಳಕೆ: ವಂಚನೆಯಿಂದ ತಪ್ಪಿಸೋದು ಹೇಗೆ?

ಜಿಯೋ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿದೆ. ಇದು ಕೋಟಿ, ಕೋಟಿ ಬಳಕೆದಾರರನ್ನು ಹೊಂದಿದೆ. ವೇಗದ ಇಂಟರ್ನೆಟ್ ಸೇವೆ ಮತ್ತು ಉತ್ತಮ ಸಂಪರ್ಕದಿಂದ ದೇಶಾದ್ಯಂತ ಜನಪ್ರಿಯತೆ ಹೊಂದಿದ್ದಾರೆ. ಮೋಸಗಾರರು ಇದರ ಲಾಭ ಪಡೆದು ಜನರನ್ನು ದಾರಿ ತಪ್ಪಿಸ್ತಿದ್ದಾರೆ.

ಅಪರಿಚಿತ ಲಿಂಕ್ ಕ್ಲಿಕ್ ಮಾಡಬೇಡಿ
ಅಧಿಕೃತ ವೆಬ್‌ಸೈಟ್, ಆಪ್ ಸ್ಟೋರ್‌ನಿಂದ ಮಾತ್ರ ಅಪ್ಲಿಕೇಶನ್ಸ್ ಡೌನ್‌ಲೋಡ್ ಮಾಡಿ.
ನೀವು ಅನುಮಾನಾಸ್ಪದ ಸಂದೇಶವನ್ನು ಸ್ವೀಕರಿಸಿದರೆ ನಿರ್ಲಕ್ಷಿಸಿ, ರಿಪೋರ್ಟ್ ಮಾಡಿ.
ನಿಮ್ಮ ಮೊಬೈಲ್​​ನಲ್ಲಿ ಬೆಸ್ಟ್ ಆಂಟಿವೈರಸ್ ಸಾಫ್ಟ್‌ವೇರ್ ಸ್ಥಾಪಿಸಿ.
ಫೈಲ್ ಡೌನ್‌ಲೋಡ್ ಮಾಡಲು ಸಂದೇಶ ಪಡೆದ್ರೆ ಅದರ ದೃಢೀಕರಣ ಪರಿಶೀಲಿಸಿ.

Related posts

Leave a Comment