ಬೆಂಗಳೂರು: ನಗರದಲ್ಲಿ ವಾಹನ ದಟ್ಟಣೆಯಿಂದ ಆ್ಯಂಬುಲೆನ್ಸ್ಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದನ್ನು ಮನಗಂಡಿರುವ ಟ್ರಾಫಿಕ್ ಪೊಲೀಸರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಅದೇನೆಂದರೆ ಆ್ಯಂಬುಲೆನ್ಸ್ಗಳ ಸುಗಮ ಸಂಚಾರಕ್ಕಾಗಿ ಇ-ಪಾತ್ ಆ್ಯಪ್ ಸಿದ್ಧಪಡಿಸಿದ್ದು, ಬಿಡುಗಡೆಗೆಯೊಂದೇ ಬಾಕಿ ಇದೆ.
ಶೀಘ್ರದಲ್ಲಿ ಪ್ರತ್ಯೇಕ ಇ-ಪಾತ್ ಆ್ಯಪ್ ಬಿಡುಗಡೆಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಸಜ್ಜಾಗಿದ್ದಾರೆ. ಆ್ಯಪ್ ಬಿಡುಗಡೆಗೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಖಾಸಗಿ ಆ್ಯಂಬುಲೆನ್ಸ್ ಮಾಲೀಕರು ಹಾಗೂ ಸಂಘಟನೆ ಜೊತೆ ಸಭೆ ನಡೆಸಲಾಗಿದ್ದು, ಸಂಚಾರಿ ಜಂಟಿ ಆಯುಕ್ತ ಎಂಎನ್ ಅನುಚೇತ್ ರಿಂದ ಆ್ಯಪ್ ಪ್ರಯೋಜನದ ಬಗ್ಗೆ ತಿಳಿಸಿದ್ದಾರೆ.
ಈ ತಿಂಗಳಾಂತ್ಯದಲ್ಲಿ ಬೆಂಗಳೂರಿನ ಎಲ್ಲಾ ಆ್ಯಂಬುಲೆನ್ಸ್ ಗಳಲ್ಲಿ ಆ್ಯಪ್ ಬಳಸುವಂತೆ ಕ್ರಮ ವಹಿಸಲಾಗಿದೆ. ಇದರಿಂದ ಟ್ರಾಫಿಕ್ ನಲ್ಲಿ ಆ್ಯಂಬುಲೆನ್ಸ್ ಸಿಲುಕಿ ಪ್ರಾಣ ಬಿಡ್ತಿರೋರ ಸಂಖ್ಯೆ ಕಡಿಮೆ ಮಾಡಲು ಪ್ಲಾನ್ ಮಾಡಲಾಗಿದೆ.
ಇ-ಪಾತ್ ಆ್ಯಪ್ ಹೇಗೆ ಕೆಲಸ ಮಾಡುತ್ತೆ?
1. ಚಾಲಕ ಸ್ಮಾರ್ಟ್ಫೋನ್ನಲ್ಲಿರುವ ಫ್ಲೈ ಸ್ಟೋರ್ ನಲ್ಲಿ ಇ-ಪಾತ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು
2. ಚಾಲಕ ಆ್ಯಂಬುಲೆನ್ಸ್ ಎಲ್ಲಿಂದ ಎಲ್ಲಿಗೆ ಹೋಗುತ್ತೆ ಅಂತ ಮಾಹಿತಿ ಅಪ್ಲೋಡ್ ಮಾಡಬೇಕು
3. ಯಾವ ಪ್ರಿಯಾರಿಟಿ ಅಂತ ಮಾಹಿತಿ ನೀಡಬೇಕು, ತುಂಬಾ ಎಮರ್ಜೆನ್ಸಿ ಇದ್ರೆ ಮೊದಲ ಪ್ರಶಸ್ತ್ಯ
4. ಗಂಭೀರ ಅಪಘಾತ, ಹಾರ್ಟ್ ಅಟ್ಯಾಕ್ ಸೇರಿ ಸೀರಿಯಸ್ ಇರೋರಿಗೆ ಮೊದಲ ಆದ್ಯತೆ
5. ಅಪ್ಲೋಡ್ ಆದ ಮಾಹಿತಿ ಸಂಚಾರ ನಿರ್ವಹಣ ಕೇಂದ್ರ ಸಿಬ್ಬಂದಿ ಹೋಗುತ್ತೆ
6. ಪರಿಶೀಲಿಸಿ ಜಿಪಿಎಸ್ ಆಧಾರದಲ್ಲಿ ಸೂಕ್ತ ರಸ್ತೆ ಸೂಚಿಸುವ ವ್ಯವಸ್ಥೆ ಮಾಡಲಾಗುತ್ತದೆ
7. ಸಿಗ್ನಲ್ ಗೆ ಅಂಬ್ಯಲೆನ್ಸ್ ಬರ್ತಿದ್ದಂತೆ ಮಾಹಿತಿ ತಿಳಿಯುತ್ತದೆ, ತಕ್ಷಣ ಸುಗಮ ಸಂಚಾರಕ್ಕೆ ವ್ಯವಸ್ಥೆ
8. ಜೊತೆಗೆ ಮುಂದಿನ ಸಿಗ್ನಲ್‌ಗೆ ಮೊದಲೇ ಮಾಹಿತಿ ನೀಡಿ ದಟ್ಟಣೆ ಕಡಿಮೆ ಮಾಡಿಸಲಾಗುತ್ತೆ
9. ಸಿಗ್ನಲ್ ಇಲ್ಲದ ಕಡೆ ಆಂಬುಲೆನ್ಸ್ ವೇಗ 5Kmphಕ್ಕಿಂತ ಕಡಿಮೆಯಾದ್ರೆ ಅಲರ್ಟ್ ಮೆಸೇಜ್ ಬರುತ್ತೆ
10. ಅದರ ಆಧಾರದಲ್ಲಿ ಸುಗಮ ಸಂಚಾರಕ್ಕೆ ಟ್ರಾಫಿಕ್ ಪೊಲೀಸರ ವ್ಯವಸ್ಥೆ
The Bengaluru police are expected to launch a mobile app that will give alerts about ambulances stuck in traffic. The e-path app is designed to prioritise ambulance movements through seamless tracking from a control centre, which is alerted when an ambulance is stuck for more than 60 seconds.