ಬೆಂಗಳೂರು: ಸಿಲಿಕಾನ್ ಸಿಟಿಯ ಪಿಜಿಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. PGಯ 5ನೇ ಮಹಡಿಯಿಂದ ಬಿದ್ದು ಯುವತಿ ಸಾವನ್ನಪ್ಪಿದ್ದಾರೆ. ಮೃತ ಯುವತಿಯನ್ನು ಗೌತಮಿ ಎಂದು ಗುರುತಿಸಲಾಗಿದೆ.
ಮೃತ ಗೌತಮಿ ಆಂಧ್ರಪ್ರದೇಶ ಕಡಪ ಮೂಲದವರು. ಬೆಂಗಳೂರಲ್ಲಿ ನೆಲೆಸಿದ್ದ ಯುವತಿ TCSನಲ್ಲಿ ಕೆಲಸ ಮಾಡುತ್ತಿದ್ದಳು. ವೈಟ್ ಫೀಲ್ಡ್‌ನ ಪ್ರಶಾಂತ್ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ.
ಪಿಜಿಯ ಐದನೇ ಮಹಡಿಯಿಂದ ಸಾವನ್ನಪ್ಪಿರುವ ಯುವತಿ ಆತ್ಮ*ಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಈ ಸಾವಿನ ತನಿಖೆ ನಡೆಸಿರುವ ವೈಟ್‌ಫೀಲ್ಡ್ ಠಾಣೆಯ ಪೊಲೀಸರಿಗೆ ಡೆತ್‌ನೋಟ್ ಕೂಡ ಸಿಕ್ಕಿದೆ.
ಡೆತ್‌ನೋಟ್‌ನಲ್ಲಿ ಏನಿದೆ?
ಸಾವಿಗೂ ಮುನ್ನ ಡೆತ್‌ನೋಟ್ ಬರೆದಿರುವ ಗೌತಮಿ, ನನ್ನ ಮೃತದೇಹವನ್ನು ಪೋಸ್ಟ್ ಮಾರ್ಟಂ ಮಾಡಬೇಡಿ. ಯಾವುದೇ ರೀತಿಯ ತನಿಖೆ ಸಹ ನಡೆಸಬೇಡಿ. Sorry. ನನ್ನ ಪೋಷಕರಿಗೆ ನನ್ನ ಮೃತದೇಹ ನೀಡಿ ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ. ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
Young woman dies after falling from 5th floor of PG. The deceased woman has been identified as Gautami.
Deceased Gautami hails from Kadapa, Andhra Pradesh. Gowthami based in Bangalore was working in TCS. The incident took place at Prashant Layout of White Field.