ಮಂಗಳೂರು : ಪ್ರಸ್ತುತ ಮಂಗಳೂರಿನಲ್ಲಿ ಚಿತ್ರೀಕರಣ ನಡೆಸುತ್ತಿರುವ ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಶುಕ್ರವಾರ ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆ ಆದಿಸ್ಥಳಕ್ಕೆ ಭೇಟಿ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕೊರಗಜ್ಜನ ಬಗ್ಗೆ ಸಾಕಷ್ಟು ಕೇಳಿದ್ದೇನೆ ಮತ್ತು ನಾನು ಮಂಗಳೂರಿನಲ್ಲಿರುವಾಗ ಈ ವಿಶೇಷ ಸ್ಥಳಕ್ಕೆ ಭೇಟಿ ನೀಡಲು ಬಯಸುತ್ತೇನೆ. ನಾನು ನನ್ನ ವೈದ್ಯರಿಗಾಗಿ ಸಿಟಿ ಲೈಫ್ ಎಂಬ ಶೀರ್ಷಿಕೆಯ ಚಲನಚಿತ್ರವನ್ನು ನಿರ್ಮಿಸುತ್ತಿದ್ದೇನೆ, ಅಲ್ಲಿ ನಾನು ಸಹ ನಿರ್ದೇಶಕನಾಗಿದ್ದೇನೆ.ಕುತ್ತಾರು ಆದಿಸ್ಥಳ ಮತ್ತು ಕಲ್ಲಾಪು ಕ್ಷೇತ್ರಗಳು ಹೆಚ್ಚಿನ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿವೆ ಎಂದು ವಿಜಯ್ ಉಲ್ಲೇಖಿಸಿದ್ದಾರೆ.
ನನ್ನ ಮಹತ್ವಾಕಾಂಕ್ಷೆಗಳನ್ನು ಈಡೇರಿಸಲು ನಾನು ಇಲ್ಲಿ ಪ್ರಾರ್ಥಿಸಿದ್ದೇನೆ, ಮಂಗಳೂರು ಸೇರಿದಂತೆ ಕರ್ನಾಟಕದ ಜನರು ಅಪಾರ ಪ್ರೀತಿ ಮತ್ತು ಬೆಂಬಲವನ್ನು ತೋರಿಸಿದ್ದಾರೆ, ನನ್ನ ಚಲನಚಿತ್ರ ಭೀಮಾ ದೊಡ್ಡ ಯಶಸ್ಸನ್ನು ತಂದಿದೆ ಎಂದು ಅವರು ಹೇಳಿದರು.
ಸಲಗ ಹಾಗೂ ಭೀಮ ಚಿತ್ರಗಳ ಯಶಸ್ಸಿನ ಬಳಿಕ ದುನಿಯಾ ವಿಜಯ್ ಚಿತ್ರದಲ್ಲಿ ವಿನಯ್ ರಾಜಕುಮಾರ್ ನಾಯಕರಾಗಿರುವ ಸಿಟಿ ಲೈಟ್ಸ್ ಸಿನಿಮಾಕ್ಕೆಆ್ಯಕ್ಷನ್ ಕಟ್ ಹೇಳಲಿದ್ದಾರೆ. ವಿಶೇಷ ಎಂದರೆ ಈ ಚಿತ್ರದ ಮೂಲಕ ವಿಜಯ್ ಅವರ ದ್ವಿತೀಯ ಪುತ್ರಿ ಮೋನಿಷಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸಂಪೂರ್ಣ ಹೊಸ ತಂಡ ಕೆಲಸ ಮಾಡಲಿರುವುದು ಮತ್ತೊಂದು ವಿಶೇಷತೆ.ಈಗಾಗಲೇ ‘ಸಿಟಿ ಲೈಟ್ಸ್’ ಚಿತ್ರದ ಸ್ಕ್ರಿಪ್ಟ್ ಕೆಲಸ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ.’
ದುನಿಯಾ ವಿಜಯ್ ಅವರ ಭೇಟಿ ವೇಳೆ ಬುರ್ದುಗೋಳಿ ಕ್ಷೇತ್ರದಲ್ಲಿ ಸನ್ಮಾನಿಸಲಾಯಿತು. ಇವರೊಂದಿಗೆ ಕದ್ರಿ ಕಾರ್ಯಕ್ರಮಗಳ ಸಂಚಾಲಕ ಜಗದೀಶ್ ಕದ್ರಿ ಇದ್ದರು. ಬುರ್ದುಗೋಳಿ ಕ್ಷೇತ್ರ ಆಡಳಿತ ಸಮಿತಿ ಸದಸ್ಯರಾದ ಪುರುಷೋತ್ತಮ ಮೇಲಂತ, ನವೀನ್ ಕಾಯಂಗಳ, ಪ್ರಶಾಂತ್ ಕಾಯಂಗಳ, ಪುರುಷೋತ್ತಮ ಕಲ್ಲಾಪು, ಸಂಜಯ್, ಯೋಗೀಶ್, ಜಯಶ್ರೀ ಕೊಟ್ಟಾರಿ, ದೀಕ್ಷಾ ಕುತ್ತಾರು, ವನಿತಾ ಗಿರೀಶ್, ಗುರು ಪ್ರಸಾದ್ ಕೊಟ್ಟಾರಿ, ಪ್ರವೀಣ್ ಕೊಲ್ಯ, ಸದಾನಂದ, ರೇಣುಕಾ, ರೇಣುಕಾ, ರೇಣುಕಾ, ಉಪಸ್ಥಿತರಿದ್ದರು.
ಸದ್ಯಕ್ಕೆ ವಿಜಯ್ ಎರಡ್ಮೂರು ಚಿತ್ರಗಳಲ್ಲಿ ಬಿಝಿ ಇದ್ದಾರೆ. ಜಡೇಶ್ ನಿರ್ದೇಶನದ ಚಿತ್ರದ ಎರಡನೇ ಹಂತದ ಚಿತ್ರೀಕರಣ ಕೂಡ ಮುಗಿಯುತ್ತಿದ್ದು, ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಈ ಚಿತ್ರಕ್ಕೆ ‘ರಾಚಯ್ಯ’ ಎಂದು ಹೆಸರಿಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಇದರ ಬಗ್ಗೆ ಜಡೇಶ್ ಇನ್ನೂ ಮಾಹಿತಿ ಹಂಚಿಕೊಳ್ಳಬೇಕಿದೆ. ಇದಾದ ಬಳಿಕ ವೆಟ್ರಿವೇಲ್ (ತಂಬಿ) ನಿರ್ದೇಶನದಲ್ಲಿ ವಿಜಯ್ ನಾಯಕರಾಗಿ ನಟಿಸಲಿದ್ದಾರೆ. ಆದರೆ, ಇವೆಲ್ಲದರ ಜತೆಗೆ ಸದ್ಯದಲ್ಲೇ ‘ಸಿಟಿ ಲೈಟ್ಸ್’ ಸಿನಿಮಾ ಕೂಡ ಸೆಟ್ಟೇರಲು ರೆಡಿಯಾಗುತ್ತಿದೆ. ಈ ಎಲ್ಲಾ ಸಿನಿಮಾಗಳ ಕೆಲಸಗಳು ಒಟ್ಟೊಟ್ಟಿಗೆ ನಡೆಯಲಿವೆಯಂತೆ.