
ಮಂಗಳೂರು : ಕಾವೂರು ಪೊಲೀಸರ ಕಾರ್ಯಾಚರಣೆಯಲ್ಲಿ ಹೊಸ ವರ್ಷಾಚರಣೆಗಾಗಿ ತಂದಿದ್ದ ಅಪಾರ ಪ್ರಮಾಣದ ಮಾದಕ ದ್ರವ್ಯವನ್ನು ಕುಳೂರು ನದಿ ದಂಡೆಯಲ್ಲಿ ಆರೋಪಿಗಳ ಸಹಿತ ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ಉಡುಪಿಯ ಉದ್ಯಾವರ ನಿವಾಸಿ ದೇವರಾಜ್ (37), ಉಡುಪಿಯ ಕಿನ್ನಿಮುಲ್ಕಿಯ ನಿವಾಸಿ ಮೊಹಮ್ಮದ್ ಪರ್ವೇಜ್ ಉಮರ್ (25), ಉಡುಪಿ ಬ್ರಹ್ಮಗಿರಿ ನಿವಾಸಿ ಶೇಖ್ ತಹೀಂ (20) ಎಂದು ಗುರುತಿಸಲಾಗಿದೆ.
ಅಂದಾಜು ಸುಮಾರು 5 ಕೆಜಿ ಗಾಂಜಾ, 100 ಗ್ರಾಂ ಎಂಡಿಎoಎ, 7 ಗ್ರಾಂ ಕೊಕೇನ್, 17 ಗ್ರಾಂ ತೂಕದ 35 ಎಂಡಿಎoಎ ಮಾತ್ರೆಗಳು, 100 ಗ್ರಾಂ ಚರಸ್, 8 ಗ್ರಾಂ ಉನ್ನತ ದರ್ಜೆಯ ಗಾಂಜಾ ಮತ್ತು 3 ಎಲ್‌ಎಸ್‌ಡಿ ಸ್ಟ್ರಿಪ್‌ಗಳ ಜೊತೆ ಹರಿತವಾದ ಚಾಕು, ತೂಕದ ಮಾಪಕಗಳು, ಪ್ಲಾಸ್ಟಿಕ್ ಕವರ್‌ಗಳು, ಹುಂಡೈ ಐ10 ಕಾರು (ನೋಂದಣಿ ಸಂಖ್ಯೆ ಕೆಎ 19 ಎಂಎಫ್ 8591), ಮತ್ತು ನೋಂದಣಿಯಾಗದ ಆಕ್ಸೆಸ್ 125 ಸ್ಕೂಟರ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಪೈಕಿ ಮೊಹಮ್ಮದ್ ಪರ್ವೇಜ್ ಉಮರ್ ಉಡುಪಿ ಜಿಲ್ಲೆಯಲ್ಲಿ ಈ ಹಿಂದೆ ಮೂರು ಗಾಂಜಾ ವಶಪಡಿಸಿಕೊಂಡ ಪ್ರಕರಣಗಳಲ್ಲಿ ಪುನರಾವರ್ತಿತ ಅಪರಾಧಿ. ಈ ಪ್ರಕರಣದಲ್ಲಿ ಇನ್ನೂ ಹಲವು ವ್ಯಕ್ತಿಗಳು ಭಾಗಿಯಾಗಿರುವ ಶಂಕೆಯಿದ್ದು ತನಿಖೆ ನಡೆಯುತ್ತಿವೆ. ಮಾದಕ ದ್ರವ್ಯ ನಿಗ್ರಹ ದಳ ಆರೋಪಿಗಳನ್ನು ಬಂಧಿಸಿ ಕಳ್ಳಸಾಗಣೆ ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇತರ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಯಲಿದೆ.