Mangalore and Udupi news
ಅಪರಾಧಕಾಸರಗೋಡುಗ್ರೌಂಡ್ ರಿಪೋರ್ಟ್ಪ್ರಸ್ತುತ

MDMA ಮಾದಕ ವಸ್ತು ಸಹಿತ ನಾಲ್ವರ ಬಂಧನ.!!

ಕಾಸರಗೋಡು : ಎಂಡಿಎಂಎ ಮಾದಕ ವಸ್ತು ಸಹಿತ ನಾಲ್ವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇವರ ಬಳಿಯಿಂದ 29.4 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತು ವನ್ನು ವಶಪಡಿಸಿ ಕೊಳ್ಳಲಾಗಿದೆ.

ಪೈವಳಿಕೆ ಬಾಯಿ ಕಟ್ಟೆ ಯಿಂದ ನಾಲ್ವರನ್ನು ಬಂಧಿಸಿದ್ದು, ಕಾರನ್ನು ವಶಪಡಿಸಿ ಕೊಳ್ಳಲಾಗಿದೆ. ಬಂಧಿತರನ್ನು ಬಳ್ಳೂರಿನ ಮುಹಮ್ಮದ್ ಅಶ್ರಫ್ (21), ಕೊಡಿಬೈಲ್‌ನ ಸಯ್ಯದ್ ನವಾಝ್ ( 30), ಬೆಳ್ಳೂರಿನ ಅಹಮ್ಮದ್ ಶಮ್ಮಾಸ್ (20) ಮತ್ತು ಬಂಟ್ವಾಳದ ಮುಹಮ್ಮದ್ ಇಸಾಕ್ (20) ಎಂದು ಗುರುತಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಮೇಲ್ನೋಟದಲ್ಲಿ ಡಿವೈಎಸ್ಪಿಪಿ. ಸುನಿಲ್ ಕುಮಾರ್ ಹಾಗೂ ಮಂಜೇಶ್ವರ ಠಾಣಾ ಸಬ್ ಇನ್ಸ್ ಪೆಕ್ಟರ್ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

Related posts

Leave a Comment