Mangalore and Udupi news
ಕ್ರೀಡೆಪ್ರಸ್ತುತ

18 ವರ್ಷಕ್ಕೆ ವಿಶ್ವ ಚೆಸ್ ಕಿರೀಟ ತೊಟ್ಟ ಗುಕೇಶ್; ಚೀನಾ​​ ಸೋಲಿಸಿ ಇತಿಹಾಸ ನಿರ್ಮಿಸಿದ ಭಾರತೀಯ

Advertisement

ಭಾರತದ ಯುವ ಗ್ರ‍್ಯಾಂಡ್ ಮಾಸ್ಟರ್ ಗುಕೇಶ್ ಈಗ ಚದುರಂಗದ ಚಾಂಪಿಯನ್. ವಿಶ್ವನಾಥ್ ಆನಂದ್ ಬಳಿಕ ಭಾರತದ 2ನೇ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಚೀನಾದ ಡಿಂಗ್ ಲಿರೆನ್‌ನನ್ನು ಮಣಿಸುವ ಮೂಲಕ ಗುಕೇಶ್ ಚದುರಂಗದಾಟದ ಸಾಮ್ರಾಟನಾಗಿದ್ದಾರೆ.

D Gukesh vs Ding Liren, World Chess Championship Game 13 Highlights: D Gukesh Misses Big Chance As Ding Liren Draws Game 13 | Chess News

ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಇತಿಹಾಸ ನಿರ್ಮಿಸಿದೆ. ಭಾರತದ ಚೆಸ್ ಆಟಗಾರ ಡಿ ಗುಕೇಶ್ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ತಮಿಳುನಾಡು ಮೂಲದ 18ನೇ ವರ್ಷದ ಗುಕೇಶ್ ವಿಶ್ವ ಚೆಸ್ ಸಾಮ್ರಾಟದ ಪಟ್ಟಕ್ಕೇರಿದ್ದಾರೆ.

D Gukesh: 'My next goal is to make it big at the World Championship': Indian chess' rising star D Gukesh is ready to conquer the world | Chess News - Times of India

ಈ ಗೆಲುವಿನ ಮೂಲಕ ಗುಕೇಶ್, ಚೆಸ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಎಂಬ ಖ್ಯಾತಿಗೆ ಪಾತ್ರರಾದರು. ವಿಶ್ವನಾಥ್ ಆನಂದ್ ಬಳಿಕ ಚದುರಂಗದ ಕಿಲಾಡಿ ಆದ 2ನೇ ಭಾರತೀಯ ಎಂಬ ಹೆಗ್ಗಳಿಕೆ ಗುಕೇಶ್??ಗೆ ಸೇರಿದೆ.

ಡಿ.ಗುಕೇಶ್.. ಪೂರ್ತಿ ಹೆಸರು ಗುಕೇಶ್ ದೊಮ್ಮರಾಜು. ಮೂಲತಃ ತಮಿಳುನಾಡಿನವರು. ತಮ್ಮ 7ನೇ ವಯಸ್ಸಿಗೆ ಚೆಸ್ ಆಡಲು ಶುರುಮಾಡಿದ ಗುಕೇಶ್, 12ನೇ ವಯಸ್ಸಿಗೆ ಚೆಸ್ ಗ್ರ‍್ಯಾಂಡ್ ಮಾಸ್ಟರ್ ಆಗಿ ದೊಡ್ಡ ಸಾಧನೆ ಮಾಡಿದರು. ಇದೀಗ 18ನೇ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದು ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ.

Chess: D Gukesh becomes youngest world champion, beats Ding Liren in Game 14 to clinch title - India Today

ವಿಶ್ವ ಚಾಂಪಿಯನ್ ಶಿಪ್ ಗೆದ್ದ ಬೆನ್ನಲ್ಲೇ ಗುಕೇಶ್ ಭಾವುಕರಾಗಿದ್ದಾರೆ.. ವಿಶ್ವ ಚಾಂಪಿಯನ್ ಶಿಪ್ ಗೆಲ್ಲುವ ಕನಸು ನನಸಾದ ಬೆನ್ನಲ್ಲೇ ಗುಕೇಶ್ ಭಾವುಕರಾಗಿ ಆನಂದಬಾಷ್ಪ ಸುರಿಸಿದ್ದಾರೆ.

ಗುಕೇಶ್ ಚದುರಂಗದಾಟದ ಸಾಮ್ರಾಟನಾಗ್ತಿದ್ದಂತೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಸೇರಿ ಹಲವು ಗಣ್ಯರು ಶುಭ ಕೋರಿದ್ದಾರೆ. ಇನ್ನು, 12 ವರ್ಷದ ಬಳಿಕ ಭಾರತದ ಆಟಗಾರ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ್ದು, ಈ ಗೆಲುವನ್ನ ಚೆಸ್ ಪ್ರೇಮಿಗಳು ಮಾತ್ರವಲ್ಲದೇ ಇಡೀ ಭಾರತವೇ ಸಂಭ್ರಮಿಸುತ್ತಿದೆ.

Related posts

Leave a Comment