
ಕಾರ್ಕಳ : ವ್ಯಕ್ತಿ ನಾಪತ್ತೆಯಾಗಿ 30 ವರ್ಷಗಳ ಬಳಿಕ ಕುಟುಂಬಸ್ಥರು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.
ಪಳ್ಳಿ ಬಂಡಸಾಲೆಯ ನಿವಾಸಿ ದಿ| ಕಾಂಯಪ್ಪ ಹೆಗ್ಡೆ ಅವರ ಪುತ್ರ ಗೋಪಾಲಕೃಷ್ಣ ಹೆಗ್ಡೆ (68) ಮೂವತ್ತು ವರ್ಷಗಳ ಹಿಂದೆ ನಾಪತ್ತೆಯಾದವರು.
ಗೋಪಾಲಕೃಷ್ಣ ಹೆಗ್ಡೆ 30 ವರ್ಷಗಳ ಹಿಂದೆ ಮನೆಯಿಂದ ಹೋದವರು ವಾಪಸ್ಸು ಬಾರದೆ ಕಾಣೆಯಾಗಿದ್ದಾರೆ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ. ಕಾಣೆಯಾದ ಗೋಪಾಲಕೃಷ್ಣ ಹೆಗ್ಡೆ ಅವರು 5.8 ಅಡಿ ಎತ್ತರವಿದ್ದು, ಕನ್ನಡ, ತುಳು ಭಾಷೆ ಮಾತನಾಡುತ್ತಿದ್ದರು. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕಾರ್ಕಳ ಪೊಲೀಸ್ ಠಾಣೆ (08258-230213)ಯನ್ನು ಸಂಪರ್ಕಿಸುವAತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.