ಮಸೀದಿಯೊಳಗೆ 5 ವರ್ಷಗಳ ಬಾಲಕಿ ಮೇಲೆ ಮೌಲ್ವಿ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದಿದೆ. ಬಾಲಕಿ ತನ್ನ ನಿವಾಸದ ಹೊರಗೆ ಆಟವಾಡುತ್ತಿದ್ದಾಗ ಮೌಲ್ವಿ ಅಸ್ಜದ್ ಎಂಬಾತ ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಮಸೀದಿಯೊಳಗೆ ಅತ್ಯಾಚಾರವೆಸಗಿದ್ದಾನೆ.
ಪೊಲೀಸರ ಪ್ರಕಾರ, ಆಕೆಯ ತಾಯಿ ಬಾಲಕಿಯನ್ನು ಹುಡುಕಿಕೊಂಡು ಅವರ ಮನೆಯ ಎದುರು ಇರುವ ಮಸೀದಿಯೊಳಗೆ ಹೋದಾಗ ವಿಷಯ ಬೆಳಕಿಗೆ ಬಂದಿದೆ. ಅಲ್ಲಿ ಬಾಲಕಿ ನೋವಿನಿಂದ ಕಿರುಚುತ್ತಿದ್ದಳು. ಸಂತ್ರಸ್ತೆಯ ತಾಯಿಯನ್ನು ನೋಡಿದ ತಕ್ಷಣ ಮೌಲ್ವಿ ಅಲ್ಲಿಂದ ಓಡಿ ಹೋಗಿದ್ದಾನೆ.
ಇದಾದ ನಂತರ ಸಂತ್ರಸ್ತೆಯ ತಾಯಿ ರಾಜಗಢ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ಆರೋಪಿ ಮೌಲ್ವಿ ಅಸ್ಜದ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಈ ಬಗ್ಗೆ ಎಸ್‌ಎಚ್‌ಒ ರಾಜ್‌ಗಢ ರಾಮಜಿಲಾಲ್ ಮೀನಾ ಮಾತನಾಡಿ ಘಟನೆಯನ್ನು ವಿವರಿಸಿದ್ದಾರೆ. ಬಾಲಕಿಯ ತಾಯಿ ಬಾಲಕಿಯನ್ನು ಹುಡುಕಿಕೊಂಡು ಮನೆಯ ಮುಂಭಾಗದಲ್ಲಿರುವ ಮಸೀದಿಯೊಳಗೆ ಹೋದಾಗ ಈ ವಿಷಯ ಬೆಳಕಿಗೆ ಬಂದಿದೆ. ಆರೋಪಿ ಮೌಲ್ವಿ ಅಸ್ಜದ್ ಎಂಬಾತನನ್ನು ಬಂಧಿಸಲಾಗಿದೆ ಎಂದಿದ್ದಾರೆ.