Mangalore and Udupi news
ಅಪರಾಧದೇಶ- ವಿದೇಶಪ್ರಸ್ತುತ

ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಣೆ – ಪೋಕ್ಸೋ ಅಡಿ ಅಪರಾಧ: ಸುಪ್ರೀಂ ತೀರ್ಪು

ಮಕ್ಕಳ ಅಶ್ಲೀಲ ವಿಡಿಯೋವನ್ನು ವೀಕ್ಷಣೆ ಮಾಡುವುದು ಪೋಕ್ಸೋ ಅಡಿ ಅಪರಾಧ ಎಂದು ಸೋಮವಾರ (ಸೆ.23) ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

ನ್ಯಾ|ಡಿ.ವೈ.ಚಂದ್ರಚೂಡ್ ಮತ್ತು ನ್ಯಾ| ಜೆ.ಪಿ. ಪರ್ದೀವಾಲಾ ಅವರಿರುವ ಪೀಠ ತೀರ್ಪು ಪ್ರಕಟಿಸಿದೆ. ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡುವುದು ಪೋಕ್ಸೋ ಹಾಗೂ ಐಟಿ ಕಾಯ್ದೆ ಪ್ರಕಾರ ಅಪರಾಧವಲ್ಲ ಎಂದು ಜ.11ರಂದು ಮದ್ರಾಸ್ ಹೈಕೋರ್ಟ್‌ತೀರ್ಪು ನೀಡಿತ್ತು.

ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಸಂಬಂಧ ವಿಚಾರಣೆ ನಡೆಸಿದ್ದ ಸುಪ್ರೀಂ ತೀರ್ಪು ನೀಡಿದ್ದು, ಮದ್ರಾಸ್ ಹೈಕೋರ್ಟ್‌ ತೀರ್ಪನ್ನು ರದ್ದು ಮಾಡಿದೆ.

ತೀರ್ಪು ನೀಡುವಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯವು ಘೋರ ದೋಷ ಎಸಗಿದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ಇಂದಿನ ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ಚೆನ್ನೈ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ಮತ್ತೆ ರೀ ಓಪನ್‌ ಮಾಡಿದೆ.

Related posts

Leave a Comment