ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ವಂಚಿತರಾದ ಬಳಿಕ ಕುಸ್ತಿಗೆ ವಿದಾಯ ಘೋಷಿಸಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಮಾಜಿ ಅಥ್ಲೀಟ್ ವಿನೇಶ್ ಪೋಗಟ್ ಇತ್ತೀಚಿನ ದಿನಗಳಲ್ಲಿ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ. ಕಳೆದ ವರ್ಷ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡುವ ಮೂಲಕ ಸುದ್ದಿಯಾಗಿದ್ದ ವಿನೇಶ್ ವಿರುದ್ಧ ಇದೀಗ WFI ಮಾಜಿ ಆಧ್ಯಕ್ಷರು ವಾಗ್ದಾಳಿ ನಡೆಸಿದ್ದು, ಈ ವಿಚಾರ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತಣಾಡಿರುವ ಬ್ರಿಜ್‌ಭೂಷಣ್, ಬಿಜೆಪಿಯನ್ನು ಅಸ್ಥಿರಗೊಳಿಸಲು ಹಾಗೂ ಕುಸ್ತಿ ಫೆಡರೇಷನ್ಅನ್ನು ತಮ್ಮ ವಶ ಮಾಡಿಕೊಳ್ಳಲು ಕಾಂಗ್ರೆಸ್ ಕುಸ್ತಿಪಟುಗಳನ್ನು ದಾಳವಾಗಿ ಬಳಸಿಕೊಂಡರು. ರಾಹುಲ್ ಗಾಂಧಿ ಅವರೊಂದಿಗೆ ಅವರುಗಳ ಫೋಟೋ ನೋಡಿದರೆ ನಾನು ಕೂಡ ಆ ರೀತಿ ಪಿಚ್ಚರ ತೆಗೆಸಿಕೊಂಡಿಲ್ಲ.
ಮುಂದಿನ ದಿನಗಳಲ್ಲಿ ವಿನೇಶ್ ರಾಹುಲ್ ಗಾಂಧಿ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದರೆ ಏನು ಆಶ್ಚರ್ಯ ಪಡಬೇಕಾಗಿಲ್ಲ. ಕುಸ್ತಿಪಟುಗಳು ಅಂದು ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ನ ಷಡ್ಯಂತ್ರ. 2012 ಹರಿಯಾಣದ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಅವರ ಮಗನ ಸೋಲಿನಿಂದ ಸಂಭವಿಸಿತು. ಹೂಡಾ ಹಾಗೂ ಕಾಂಗ್ರೆಸ್ ಅಂದಿನಿಂದಲೂ ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತ ಬಂದಿದೆ ಎಂದು ಆರೋಪಿಸಿದ್ದಾರೆ.
ಕುಸ್ತಿಪಟುಗಳ ಬ್ರಿಜ್‌ಭೂಷಣ್ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳದ ಆರೋಪ ದೇಶಾದ್ಯಂತ ವ್ಯಾಪಕ ಸದ್ದು ಮಾಡಿತ್ತು. ವಿಪಕ್ಷಗಳು ಬ್ರಿಜ್‌ಭೂಷಣ್ ಅವರ ರಾಜೀನಾಮೆ ಹಾಗೂ ಮೋದಿ ಸರ್ಕಾರ ದೇಶದ ಮಹಿಳೆಯರ ಕ್ಷಮೆಯಚಿಸಬೇಕೆಂದು ಆಗ್ರಹಿಸಿದ್ದವು. ಇದರ ಪರಿಣಾಮವಾಗಿ ಬ್ರಿಜ್ಭೂಷಣ್ಗೆ ಬದಲಿಗೆ ಈ ಬಾರಿಗೆ ಅವನ ಮಗನಿಗೆ ಟಿಕೆಟ್ ನೀಡಲಾಗಿತ್ತು.