ಸುರತ್ಕಲ್: ಬಾರ್ ನಲ್ಲಿ ನಡೆದ ಗಲಾಟೆಗೆ ಎಂಟ್ರಿ ಕೊಟ್ಟ ಬಜರಂಗದಳದ ಕಾರ್ಯಕರ್ತರು ಹಿಂದೂಗಳಿಗೆ ಹಲ್ಲೆ ನಡೆಸಿದ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿತರನ್ನು ಬಜರಂಗದಳದ ಕಾರ್ಯಕರ್ತ ಕಾರ್ತಿಕ್ ಶೆಟ್ಟಿ, ಕೃಷ್ಣ ಶೆಟ್ಟಿ ಕೃಷ್ಣಾಪುರ, ಅಡಪೆ ಯಾನೆ ನಿತೀನ್ ಎಂದು ಗುರುತಿಸಲಾಗಿದೆ. ಕಾರ್ತಿಕ್ ಶೆಟ್ಟಿ ಕಾಟಿಪಳ್ಳದಲ್ಲಿ ಬಜರಂಗದಳ ಕಾರ್ಯಕರ್ತ ಎಂದು ತಿರುಗುತ್ತಿದ್ದು ಈತನ ವಿರುದ್ಧ ದರೋಡೆ ಹಾಗೂ ಹಲವು ಪ್ರಕರಣಗಳು ಇವೆ ಎನ್ನಲಾಗಿದೆ.
ಪೊಡಿಯೆಟ್ಟಿ ಯಾನೆ ರಫೀಕ್ ಹಾಗೂ ರೋಶನ್, ಸಂದೇಶ್ ಎಂಬವರ ಮಧ್ಯೆ ಕೈಕಂಬ ಕಾರ್ಗೋಗೇಟ್ ಬಳಿಯಿರುವ ಆರೆಂಜ್ ಬಾರ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ರೋಶನ್ ತಂಡ ಪೊಡಿಯೆಟ್ಟಿ ಯಾನೆ ರಫೀಕ್ ಗೆ ಹಲ್ಲೆ ನಡೆಸಿದ್ದಾರೆ. ಇದೆ ಕಾರಣಕ್ಕೆ ರೋಶನ್ ಸಹೋದರ ವಿಶ್ವ ಹಾಗೂ ಗಿರೀಶ್ ಎಂಬವರು ಅದೇ ಬಾರಿನಲ್ಲಿದ್ದ ಸಂದರ್ಭ ಬಜರಂಗದಳದ ಕಾರ್ಯಕರ್ತ ಕಾರ್ತಿಕ್ ಶೆಟ್ಟಿ ಜೊತೆ ಕೃಷ್ಣ ಶೆಟ್ಟಿ ಕೃಷ್ಣಾಪುರ, ಅಡಪೆ ಯಾನೆ ನಿತೀನ್ ಹಾಗೂ ಇತರರು ಆಗಮಿಸಿ ಹಲ್ಲೆ ನಡೆಸಿದ್ದು, ಬಾರಿನಲ್ಲಿ ಮಾರಾಮಾರಿ ನಡೆದಿದೆ.
ಮುಸ್ಲಿಂ ವ್ಯಕ್ತಿ ಪೊಡಿಯೆಟ್ಟಿ ಯಾನೆ ರಫೀಕ್ ಗೆ ಹಲ್ಲೆ ನಡೆಸಿದ್ದಕ್ಕೆ ಬಜರಂಗದಳದ ಕಾರ್ಯಕರ್ತರು ಎಂಟ್ರಿಕೊಟ್ಟು ಹಿಂದೂಗಳ ಮಧ್ಯೆಯೇ ಮಾರಾಮಾರಿ ನಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದೂ ಸಂಘಟನೆಗಳ ಹೆಸರು ಕೆಡಿಸಲು ಇಂತಹ ಪುಡಿ ರೌಡಿಗಳೇ ಕಾರಣ ಎನ್ನುವಂತಗಾಗಿದೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿತ್ತು. ಸದ್ಯ ಆರೋಪಿಗಳಿಗೆ ಜಾಮೀನು ದೊರೆತಿದೆ.
