Mangalore and Udupi news
ಉಡುಪಿಗ್ರೌಂಡ್ ರಿಪೋರ್ಟ್ಪ್ರಸ್ತುತರಾಜ್ಯ

ಈಜಲು ಹೋದ ಬಾಲಕರು ಕೆರೆಯಲ್ಲಿ ಮುಳುಗಿ ಸಾವು

ಕುಂದಾಪುರ : ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೈಂದೂರಿನಲ್ಲಿ ನಡೆದಿದೆ.

ಬೈಂದೂರು ಯೋಜನಾನಗರದ ನಾಗೇಂದ್ರ (13) ಹಾಗೂ ರೈಲ್ವೆ ನಿಲ್ದಾಣದ ಬಳಿ ವಾಸಿಸುವ ಶಾನ್ ಮುಹಮ್ಮದ್ ಶಫಾನ್ (13) ‌ ಮೃತ ವಿದ್ಯಾರ್ಥಿಗಳು.

ಪರೀಕ್ಷೆ ಮುಗಿಸಿ ಮನೆಯಲ್ಲಿ ಊಟ ಮಾಡಿ ಇಬ್ಬರು ಬೈಂದೂರು ನಗರ ಸಮೀಪದ ಕೆರೆಕಟ್ಟೆ ಕೆರೆಯಲ್ಲಿ ಈಜಲು ತೆರಳಿದ್ದಾರೆ. ಇಬ್ಬರಿಗೂ ಅಷ್ಟೇನು ಈಜಲು ಬಾರದ ಕಾರಣ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳವಾರ ವಿಪರೀತ ಮಳೆ ಇರುವ ಕಾರಣ ಕರೆಯ ಸಮೀಪ ಜನ ಇದ್ದಿರಲಿಲ್ಲ.

ಸಂಜೆ ವರಗೂ ಮನೆಗೆ ಬಾರದಿರುವ ಕಾರಣ ಆರಕ್ಷಕ ಠಾಣೆಯಲ್ಲಿ ದೂರು ನೀಡಿದ್ದು, ಬಳಿಕ ಕೆರೆಯ ಬಳಿ ಮೃತದೇಹ ಪತ್ತೆಯಾಗಿದೆ. ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Comment