ಮಂಗಳೂರು : ಕರಾವಳಿಯ ಹೆಸರಾಂತ ಸೇವಾ ಸಂಸ್ಥೆ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ.) ಮಂಗಳೂರು ಇದರ ಆಶ್ರಯದಲ್ಲಿ 6 ನೇ ವರ್ಷದ ಭಕ್ತಿ ಧರ್ಮದ ನಡೆ ಬೃಹತ್ ಪಾದಯಾತ್ರೆಯು ಡಿಸೆಂಬರ್ 22ರ ಭಾನುವಾರದಂದು ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಮಂಜಣ್ಣ ಸೇವಾ ಬ್ರಿಗೇಡ್ ಸಂಸ್ಥೆ ಭಕ್ತಿ ಧರ್ಮದ ಗುರಿಯೊಂದಿಗೆ ಲೋಕ ಕಲ್ಯಾಣಕ್ಕಾಗಿ ಕಷ್ಟ ಕಾರ್ಪಾಣ್ಯಗಳ ನಿವಾರಣೆಗಾಗಿ ಹಾಗೂ ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ, ಬಲಿಷ್ಠ ಭಾರತ ನಿರ್ಮಾಣಕ್ಕೆ, ಹೆಮ್ಮೆಯ ಸೈನಿಕರಿಗೆ ದೇವಿಶಕ್ತಿಗಳು ಬಲತುಂಬುವoತೆ ಪ್ರಾರ್ಥಿಸಿ ಭಕ್ತ ಜನರ ಪಾದಯಾತ್ರೆ ನಡೆಸಿದ್ದಾರೆ. ಚಿತ್ರಾಪುರ ದೇವಸ್ಥಾನ ಮತ್ತು ಚಿತ್ರಾಪುರ ಮಠದ ಶ್ರೀ ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರ ಶುಭಾಶೀರ್ವಾದದೊಂದಿಗೆ ಪರಮ ಪಾದದಿಂದ ಮೂಲ ಪಾದದೆಡೆಗೆ ಸುಭೀಜ್ಞಾ ಸಮಾಜದ ಗುರಿಯೊಂದಿಗೆ ಸಹಸ್ರ ಸಂಖ್ಯೆಯಲ್ಲಿ ಸೇರಿದ ಭಕ್ತರ ಪಾದಾಯತ್ರೆಯು ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರೆಗೆ ವಿಜೃಂಭಣೆಯಿoದ ಸಾಗಿತು.
ಹಿಂದೂ ಸಮಾಜವನ್ನು ಬಲಗೊಳಿಸುವ ಉದ್ದೇಶದಿಂದ ಹುಟ್ಟಿಕೊಂಡ ಸಂಸ್ಥೆ ಇಂದು ಬೆಳೆದು ಹೆಮ್ಮರವಾಗಿ ನಿಂತಿದೆ. ಕಳೆದ ಹಲವು ವರ್ಷದಿಂದ 200ಕ್ಕೂ ಅಧಿಕ ಅಶಕ್ತ ಹಿಂದೂ ಕುಟುಂಬವನ್ನು ಗುರುತಿಸಿ ಸಹಾಯ ಹಸ್ತ ಚಾಚಿದೆ. ಬರೋಬ್ಬರಿ 60 ಲಕ್ಷಕ್ಕೂ ಅಧಿಕ ಹಣದ ನೆರವು ನೀಡಿ ಬಡವರ ಕಣ್ಣೀರೊರೆಸುವ ಕಾರ್ಯ ಮಾಡುತ್ತಿದೆ. ಈ ಸಂಸ್ಥೆ ಭಕ್ತಿ ಧರ್ಮದ ಗುರಿಯೊಂದಿಗೆ ಲೋಕ ಕಲ್ಯಾಣಕ್ಕಾಗಿ ಕಷ್ಟ ಕಾರ್ಪಾಣ್ಯಗಳ ನಿವಾರಣೆಗಾಗಿ ಹಾಗೂ ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ, ಬಲಿಷ್ಠ ಭಾರತ ನಿರ್ಮಾಣಕ್ಕೆ, ಹೆಮ್ಮೆಯ ಸೈನಿಕರಿಗೆ ದೇವಿಶಕ್ತಿಗಳು ಬಲತುಂಬುವoತೆ ಪ್ರಾರ್ಥಿಸಿ ಭಕ್ತ ಜನರ ಪಾದಯಾತ್ರೆ ಕಳೆದ ಆರು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ.
ಚಿತ್ರಾಪುರ ದೇವಸ್ಥಾನ ಮತ್ತು ಚಿತ್ರಾಪುರ ಮಠದ ಶ್ರೀ ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಶ್ರೀ ಪಾದರು, ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಮಹಾಕಾಳಿ ಮಹಾಸಂಸ್ಥಾನ ಸಧರ್ಮ ಓಂ ಶಕ್ತಿಪೀಠ ನಿಪ್ಪಾಣಿ ಇದರ ಶ್ರೀ ಶ್ರೀ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಚಿತ್ರಾಪುರ ಇದರ ಪ್ರಧಾನ ಅರ್ಚಕರು ಶ್ರೀಪತಿ ಭಟ್, ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಸೇರಿದಂತೆ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ಇದರ ಸ್ಥಾಪಕಧ್ಯಕ್ಷ ಮನೋಜ್ ಕೋಡಿಕೆರೆ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ಸರ್ವ ಸದಸ್ಯರ ಸಮ್ಮುಖದಲ್ಲಿ ಚಿತ್ರಾಪುರ ದೇವಸ್ಥಾನದಲ್ಲಿ ದೇವರಲ್ಲಿ ಪ್ರಾರ್ಥಿಸಿ ಪಾದಯಾತ್ರೆಗೆ ಚಾಲನೆ ದೊರೆಯಿತು.
ಪಾದಯಾತ್ರೆಯಲ್ಲಿ ಕುಣಿತ ಭಜನೆ, ಚೆಂಡೆ ವಾದನ, ದೇವಿಯ ವೇಷಭೂಷಣ, ಆಕರ್ಷಕ ವಾಹನಗಳು ಗಮನಸೆಳೆಯಿತು. ಪಾದಯಾತ್ರೆಯುದ್ದಕ್ಕೂ ವಿವಿಧ ಗಣ್ಯರು ಸೇರಿಕೊಂಡು ಪಾದಯಾತ್ರಿಗಳಿಗೆ ಶುಭಹಾರೈಸಿದರು. ದ.ಕ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹೀಗೆ ಹಲವು ಗಣ್ಯರು ಆಗಮಿಸಿ ಮೆರೆಗು ನೀಡಿದರು.
ದಾರಿಯುದ್ಧಕ್ಕೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಪಾದಯಾತ್ರಿಗಳಿಗೆ ಪಾನೀಯ ವ್ಯವಸ್ಥೆ ಮಾಡಲಾಗಿತ್ತು.
ನಂತರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಚಿತ್ರಾಪುರ ದೇವಸ್ಥಾನ ಮತ್ತು ಚಿತ್ರಾಪುರ ಮಠದ ಶ್ರೀ ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು, ಮಂಗಳೂರು ಉತ್ತರ ಶಾಸಕ ಡಾ| ಭರತ್ ವೈ ಶೆಟ್ಟಿ, ಬಿಜೆಪಿ ಮುಖಂಡ ಸುನಿಲ್ ಆಳ್ವ, ಮ.ನ.ಪಾ ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಅಮೆಚೂರು ಕಬಡ್ಡಿ ಸಂಘಟನೆ ಅಧ್ಯಕ್ಷ ರಾಕೇಶ್ ಮಲ್ಲಿ, ಬಿಜೆಪಿ ಮುಖಂಡರಾದ ಜಯಪ್ರಕಾಶ್ ವಾಮಂಜೂರು, ಈಶ್ವರ್ ಕಟೀಲ್, ಮಾಜಿ ಜಿಲ್ಲಾ ಪಂಚಾಯತ್ ಪಾಧ್ಯಕ್ಷೆ ಕಸ್ತೂರಿ ಪಂಜ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಬಪ್ಪನಾಡು ಕ್ಷೇತ್ರದ ಅನುವಂಶೀಕ ಮೋಕ್ತೆಸರರು ಮನೋಹರ್ ಶೆಟ್ಟಿ ಕಕ್ವಗುತ್ತು, ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ಇದರ ಸ್ಥಾಪಕಧ್ಯಕ್ಷ ಮನೋಜ್ ಕೋಡಿಕೆರೆ, ಮ.ನ.ಪಾ ಕಾರ್ಪೋರೇಟರ್ ವರುಣ್ ಚೌಟ, ಪೊಳಲಿ ಟೈಗರ್ ಇದರ ಸಂತೋಷ್ ಪೊಳಲಿ ಉಪಸ್ಥಿತರಿದ್ದರು.