
ಸುರತ್ಕಲ್: ಎಲೆ ಅಡಿಕೆ ತರುವುದಾಗಿ ಮನೆಯಿಂದ ಹೋದವರು ಹಿಂದಿರುಗಿ ಬಾರದೆ ನಾಪತ್ತೆಯಾದ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಾಪತ್ತೆಯಾದ ವ್ಯಕ್ತಿಯನ್ನು ಬೆಳ್ತಂಗಡಿ ನೇಲಳಿಕೆ ಪಡಂಗಡಿ ನಿವಾಸಿ ಶಿವಪ್ಪ ಮೂಲ್ಯ (76) ಎಂದು ಗುರುತಿಸಲಾಗಿದೆ.
ಶಿವಪ್ಪ ಮೂಲ್ಯ ಅವರು ದಿನಾಂಕ 21/12/2024 ರಂದು ಅಕ್ಕನ ಮಗನ ಮನೆಯಾದ ಮಿತೊಟ್ಟು ಹೊಸಬೆಟ್ಟು ಸುರತ್ಕಲ್ ಇಲ್ಲಿಗೆ ಬಂದಿದ್ದು, ಸಂಜೆ 6:00 ಗಂಟೆಗೆ ಎಲೆ ಅಡಿಕೆ ತರುವುದಾಗಿ ತಿಳಿಸಿ ಮನೆಯಿಂದ ಹೋದವರು ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ನೀಲಿ ಬಣ್ಣದ ಅಂಗಿ ಮತ್ತು ಬಿಳಿ ಬಣ್ಣದ ಪಂಚೆ ಧರಿಸಿದ್ದರು. ಕನ್ನಡ, ತುಳು ಭಾಷೆ ಬಲ್ಲವರಾಗಿದ್ದು, ಸ್ವಲ್ಪ ನೆನಪಿನ ಶಕ್ತಿ ಕಮ್ಮಿ ಇದ್ದು ಇವರು ಎಲ್ಲಿಯಾದರೂ ಕಂಡು ಬಂದರೆ ಸುರತ್ಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಸಂಪರ್ಕಿಸಿ: 08242220540