ಮಂಗಳೂರು : ಕರಾವಳಿಯ ಹೆಸರಾಂತ ಸೇವಾ ಸಂಸ್ಥೆ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ರಿ ಮಂಗಳೂರು ಇದರ ಆಶ್ರಯದಲ್ಲಿ 6 ನೇ ವರ್ಷದ ಭಕ್ತಿ ಧರ್ಮದ ನಡೆ ಬೃಹತ್ ಪಾದಯಾತ್ರೆ. ಇದೇ ಬರುವ ಡಿಸೆಂಬರ್ 22ರ ಭಾನುವಾರದಂದು ನಡೆಯಲಿದೆ.
ಹಿಂದೂ ಸಮಾಜವನ್ನು ಬಲಗೊಳಿಸುವ ಉದ್ದೇಶದಿಂದ ಹುಟ್ಟಿಕೊಂಡ ಸಂಸ್ಥೆ ಇಂದು ಬೆಳೆದು ಹೆಮ್ಮರವಾಗಿ ನಿಂತಿದೆ. ಕಳೆದ ಹಲವು ವರ್ಷದಿಂದ 200ಕ್ಕೂ ಅಧಿಕ ಅಶಕ್ತ ಹಿಂದೂ ಕುಟುಂಬವನ್ನು ಗುರುತಿಸಿ ಸಹಾಯ ಹಸ್ತ ಚಾಚಿದೆ. ಬರೋಬ್ಬರಿ 60 ಲಕ್ಷಕ್ಕೂ ಅಧಿಕ ಹಣದ ನೆರವು ನೀಡಿ ಬಡವರ ಕಣ್ಣೀರೊರೆಸುವ ಕಾರ್ಯ ಮಾಡುತ್ತಿದೆ. ಈ ಸಂಸ್ಥೆ ಭಕ್ತಿ ಧರ್ಮದ ಗುರಿಯೊಂದಿಗೆ ಲೋಕ ಕಲ್ಯಾಣಕ್ಕಾಗಿ ಕಷ್ಟ ಕಾರ್ಪಾಣ್ಯಗಳ ನಿವಾರಣೆಗಾಗಿ ಹಾಗೂ ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ, ಬಲಿಷ್ಠ ಭಾರತ ನಿರ್ಮಾಣಕ್ಕೆ, ಹೆಮ್ಮೆಯ ಸೈನಿಕರಿಗೆ ದೇವಿಶಕ್ತಿಗಳು ಬಲತುಂಬುವoತೆ ಪ್ರಾರ್ಥಿಸಿ ಭಕ್ತ ಜನರ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಪರಮ ಪಾದದಿಂದ ಮೂಲ ಪಾದದೆಡೆಗೆ ಸುಭೀಜ್ಞಾ ಸಮಾಜದ ಗುರಿಯೊಂದಿಗೆ ಭಕ್ತ ಜನರ ಪಾದಾಯತ್ರೆ. ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥನಕ್ಕೆ ಚಿತ್ರಾಪುರ ದೇವಸ್ಥಾನ ಮತ್ತು ಚಿತ್ರಾಪುರ ಮಠದ ಶ್ರೀ ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರ ಶುಭಾಶೀರ್ವಾದದೊಂದಿಗೆ 6ನೇ ವರ್ಷದ ಭಕ್ತಿ ಧರ್ಮದ ನಡೆ. ಇದೇ ಬರುವ ಡಿ. 22ರ ಭಾನುವಾರದಂದು ಮುಂಜಾನೆ ಆರು ಗಂಟೆಗೆ ಪ್ರಾರಂಭಗೊಳ್ಳಲಿದೆ.
ಸದ್ಯ ಕಾರ್ಯಕ್ರಮದ ಯಶಸ್ಸಿಗಾಗಿ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ವಿವಿಧ ಗಣ್ಯರ ಭೇಟಿಯಾಗಿ, ಹಲವು ದೇವಸ್ಥಾನ ಹಾಗೂ ಊರಪರವೂರ ಜನರಿಗೆ ಆಮಂತ್ರಣ ಪತ್ರಿಕೆ ವಿತರಿಸುತ್ತ ಭಕ್ತ ಬಾಂಧವರನ್ನು ಪಾದಯಾತ್ರೆಯಲ್ಲಿ ಸೇರುವಂತೆ ಮಂಜಣ್ಣ ಸೇವಾ ಬ್ರಿಗೇಡ್ ಇದರ ಸದಸ್ಯರು ವಿನಂತಿಸಿಕೊoಡರು. ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಧಾರ್ಮಿಕ ಮುಂದಾಳುಗಳು ಸೇರಿದಂತೆ ರಾಜಕಾರಣಿಗಳು, ಚಲನಚಿತ್ರ ನಟರು ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಶುಭಾಶಯ ಕೋರಿದ್ದಾರೆ.
“ಬನ್ನಿ ಭಕ್ತ ಬಾಂಧವರೇ, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ”
ಚಿತ್ರಾಪುರ ದೇವಸ್ಥಾನ ಮತ್ತು ಚಿತ್ರಾಪುರ ಮಠದ ಶ್ರೀ ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಶ್ರೀ ಪಾದರು, ಪೀಠಾಧಿಪತಿಗಳು, ಮಹಾಕಾಳಿ ಮಹಾಸಂಸ್ಥಾನ ಸಧರ್ಮ ಓಂ ಶಕ್ತಿಪೀಠ ನಿಪ್ಪಾಣಿ ಇದರ ಶ್ರೀ ಶ್ರೀ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಚಿಪ್ರಾಪುರ ಇದರ ಪ್ರಧಾನ ಅರ್ಚಕರು ಶ್ರೀಪತಿ ಭಟ್ ಸೇರಿದಂತೆ ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಚಲನಚಿತ್ರ ನಟ ಅರ್ಜುನ್ ಕಾಪಿಕಾಡ್, ತುಳು ಯಕ್ಷ ಬ್ರಹ್ಮ ಮಾಧವ ಭಂಡಾರಿ ಕುಳಾಯಿ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ, ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ ಮುಲ್ಕಿ, ಮನೋಹರ್ ಶೆಟ್ಟಿ ಕಕ್ವಗುತ್ತು, ಚಲನಚಿತ್ರ ನಟ ವಿನಿತ್, ಹಾಸ್ಯ ನಟ ರವಿ ರಾಮಕುಂಜ, ಹಾಸ್ಯ ನಟ ದೀಪಕ್ ರೈ ಪಾಣಾಜೆ, ಶನಿಲ್ ಗುರು, ಪ್ರಕಾಶ್ ಕೆ ತೂಮಿನಾಡು ಕಾರ್ಯಕ್ರಮಕ್ಕೆ ಶುಭಾಶಯ ಕೋರಿದ್ದಾರೆ.