ಬಂಟ್ವಾಳ : ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬoಧಿಸಿದoತೆ ಎನ್.ಐ.ಎ.ಅಧಿಕಾರಿಗಳು ಜಿಲ್ಲೆಯ ಹಲವು ಕಡೆಗಳಲ್ಲಿ ದಾಳಿ ನಡೆಸಿದ ಘಟನೆ ನಡೆದಿದೆ.
ಮಾಣಿ ಸಮೀಪದ ಕೊಡಾಜೆ ನಿವಾಸಿ ಶರೀಫ್ ಕೊಡಾಜೆ ಅವರ ಮನೆಗೆ ಕೇಂದ್ರದ ಎನ್.ಐ.ಎ ತನಿಖಾ ಸಂಸ್ಥೆಯ ಪೋಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಎನ್.ಐ.ಎ.ಅಧಿಕಾರಿಗಳು ಜಿಲ್ಲೆಯ ಕೆಲವೊಂದು ಮನೆಗಳಿಗೆ ದಾಳಿ ನಡೆಸಿದ್ದು, ಇದರಲ್ಲಿ ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಕೊಡಾಜೆ ಶರೀಫ್ ಅವರ ಮನೆಯು ಒಂದಾಗಿದೆ.
ಪ್ರವೀಣ್ ಕೊಲೆ ಪ್ರಕರಣಕ್ಕೆ ಸಂಬoಧಿಸಿದoತೆ ಸಹಕಾರ ನೀಡಿದ ಆರೋಪ ಎದುರಿಸುವ ಶರೀಫ್ ತಲೆಮರೆಸಿಕೊಂಡಿದ್ದು, ಈ ಪ್ರಕರಣಕ್ಕೆ ಸಂಬoಧಿಸಿದoತೆ ಪೋಲೀಸರು ಮನೆಗೆ ದಾಳಿ ನಡೆಸಿದ್ದಾರೆ. ಆದರೆ ಪೋಲೀಸರು ಎಷ್ಟು ಗಂಟೆಗಳ ಕಾಲ ಮನೆಯಲ್ಲಿದ್ದರು, ಯಾವ ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ. ಸ್ಥಳೀಯ ಪೋಲಿಸ್ ಠಾಣೆಗೆ ದಾಳಿ ನಡೆಸಿರುವ ಬಗ್ಗೆ ಮಾಹಿತಿ ಇದ್ದು ,ಹೆಚ್ಚಿನ ಯಾವುದೇ ವಿಚಾರಗಳು ಅವರಿಗೆ ತಿಳಿದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಕೆಯ್ಯೂರು ಶಾಲಾ ಬಳಿಯ ಬಾಡಿಗೆ ಮನೆಯೊಂದರಲ್ಲಿ ಅಬೂಬಕ್ಕರ್ ಸಿದ್ದಿಕ್ ಎಂಬವನ ಮನೆಗೂ ದಾಳಿ ನಡೆಸಿದ್ದರು. ಮನೆಗೆ ಎನ್‌ಐಎ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸಿದ್ದಾರೆ. ಜೊತೆಗೆ ಸಿದ್ದಿಕ್ ಅವರ ಸಹೋದರರೋರ್ವರು ಕೆಯ್ಯೂರಿನ ಅರಿಕ್ಕಿಲದಲ್ಲಿ ವಾಸವಾಗಿದ್ದು, ಅಲ್ಲಿಗೂ ತೆರಳಿದ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಸರ್ಚ್ ವಾರೆಂಟ್ ಪಡೆದ ಎನ್‌ಐಎ ಪೊಲೀಸರು ಕೆಯ್ಯೂರಿಗೆ ಆಗಮಿಸಿ ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.