Mangalore and Udupi news
ಗ್ರೌಂಡ್ ರಿಪೋರ್ಟ್ದೇಶ- ವಿದೇಶಪ್ರಸ್ತುತರಾಜ್ಯ

ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್‌ ವೇ ಸಂಚಾರ ಮುಕ್ತ; ಟೋಲ್ ಫ್ರೀ.!

ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್‌ ವೇ ಸಂಚಾರ ಮುಕ್ತ; ಟೋಲ್ ಫ್ರೀ.!

ದಕ್ಷಿಣ ಭಾರತದ ಅತಿ ದೊಡ್ಡ ಎಕ್ಸ್‌ಪ್ರೆಸ್‌ – ಕಾಮಗಾರಿ ಸಂಪೂರ್ಣ ಮುಕ್ತಾಯ

ದಕ್ಷಿಣ ಭಾರತದ ಅತಿದೊಡ್ಡ ಎಕ್ಸ್‌ಪ್ರೆಸ್‌ ವೇನಲ್ಲಿ ಒಂದಾಗಿರುವ ಚೆನ್ನೈ – ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಸಂಚಾರಕ್ಕೆ ಮುಕ್ತವಾಗಿದೆ. ಮೂರು ರಾಜ್ಯಗಳನ್ನ ಒಳಗೊಂಡ ಎಕ್ಸ್‌ಪ್ರೆಸ್‌ ವೇ ಮಾರ್ಗ ಇದಾಗಿದೆ.

ಕರ್ನಾಟಕ ರಾಜ್ಯ ಭಾಗದ 71 ಕಿಲೋ ಮೀಟರ್ ಮಾರ್ಗದ ಕಾಮಗಾರಿ ಸಂಪೂರ್ಣ ಮುಕ್ತಾಯವಾಗಿದೆ. ಮಾರ್ಗಸೂಚಿ ಫಲಕಗಳು, ನಾಮಫಲಕಗಳು, ಡಿಜಿಟಲ್ ಫಲಕಗಳು ಸೇರಿದಂತೆ ಕೆಲಸಗಳು ಮುಗಿದಿದ್ದು, ತಾತ್ಕಾಲಿಕವಾಗಿ ಟೋಲ್ ಇಲ್ಲದೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹೊಸಕೋಟೆಯ ಇಂಟರ್ ಚೇಂಜ್‌ನಿಂದ ಚೆನ್ನೈವರೆಗೆ 280 ಕಿ.ಮೀ ಉದ್ದದ ಎಕ್ಸ್‌ಪ್ರೆಸ್ ವೇ ಇದಾಗಿದೆ. ಸದ್ಯ ಹೊಸಕೋಟೆ ಸ್ಯಾಟ್‌ಲೈಟ್ ರಿಂಗ್ ರಸ್ತೆಯಿಂದ ಆಂಧ್ರ ಗಡಿ ಸುಂದರಪಾಳ್ಯವರೆಗೆ ಸಂಚಾರಕ್ಕೆ ರಸ್ತೆ ರೆಡಿಯಾಗಿದೆ.

ವೇಗದ ಮಿತಿ 100 ಕಿ.ಮೀಗೆ ಸೀಮಿತಗೊಳಿಸಲಾಗಿದೆ.ಆಂಧ್ರಪ್ರದೇಶ, ತಮಿಳುನಾಡು ಭಾಗದಲ್ಲಿ ಎಕ್ಸ್‌ಪ್ರೆಸ್‌ ಹೈವೇ ಕಾಮಗಾರಿ ಇನ್ನೂ ಮುಂದುವರೆದಿದೆ. ಈ ವರ್ಷಾಂತ್ಯಕ್ಕೆ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಹೈವೇ ಸಂಚಾರಕ್ಕೆ ಸಂಪೂರ್ಣ ಮುಕ್ತವಾಗುವ ಸಾಧ್ಯತೆ ಇದೆ. ಈ ಎಕ್ಸ್‌ಪ್ರೆಸ್‌ ವೇಗೆ ಕರ್ನಾಟಕದಲ್ಲಿ ಮಾಲೂರು, ಬಂಗಾರಪೇಟೆ ಮತ್ತು ಆಂಧ್ರ ಗಡಿ ಸುಂದರ ಪಾಳ್ಯದಲ್ಲಿ ಮೂರು ಇಂಟರ್ ಚೇಂಜ್‌ಗಳಿವೆ. ಸಂಪೂರ್ಣ ಕಾಮಗಾರಿ‌ ಮುಕ್ತಾಯದ ಬಳಿಕ ಟೋಲ್ ಸಂಗ್ರಹ ಆರಂಭವಾಗುವ ಸಾಧ್ಯತೆ ಇದೆ.

Advertisement

Related posts

Leave a Comment